Saturday, June 6, 2026
Homeಕರಾವಳಿಉಡುಪಿಹೆಬ್ರಿ: ಅಪ್ರಾಪ್ತೆಯ ಮೇಲೆ ಸಂಬಂಧಿಕನಿಂದಲೇ ಅತ್ಯಾಚಾರ: ಆರೋಪಿ ಅರೆಸ್ಟ್

ಹೆಬ್ರಿ: ಅಪ್ರಾಪ್ತೆಯ ಮೇಲೆ ಸಂಬಂಧಿಕನಿಂದಲೇ ಅತ್ಯಾಚಾರ: ಆರೋಪಿ ಅರೆಸ್ಟ್

- Advertisement -
- Advertisement -

ಹೆಬ್ರಿ: 16ರ ಹರೆಯದ ಅಪ್ರಾಪ್ತೆಯ ಮೇಲೆ ಸಂಬಂಧಿಕನೇ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೆಬ್ರಿ ತಾಲೂಕಿನ ಮುದ್ರಾಡಿ ಸಮೀಪದ ಬಚ್ಚಪ್ಪು ನಿವಾಸಿ ಗಣೇಶ್ ಶೆಟ್ಟಿಗಾರ್ (23) ಬಂಧಿತ ಆರೋಪಿ.

ಆರೋಪಿ ಮನೆಗೆ ದೂರದ ಸಂಬಂಧಿಯಾದ ಬಾಲಕಿ ಹೋಗಿದ್ದಾಗ ಆಕೆಯನ್ನ ಪುಸಲಾಯಿಸಿ ಅತ್ಯಾಚಾರವೆಸಗಿದ್ದ. ಇದೀಗ ಬಾಲಕಿ ಗರ್ಭಿಣಿಯಾಗಿದ್ದು ಈ ಬಗ್ಗೆ ಬಾಲಕಿಯ ಪೋಷಕರು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಹೆಬ್ರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!