Thursday, June 4, 2026
Homeತಾಜಾ ಸುದ್ದಿಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ: ಮತ್ತೊಂದು ರಹಸ್ಯ ಬಿಚ್ಚಿಟ್ಟ ಯುವತಿ ತಂದೆ

ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ: ಮತ್ತೊಂದು ರಹಸ್ಯ ಬಿಚ್ಚಿಟ್ಟ ಯುವತಿ ತಂದೆ

- Advertisement -
- Advertisement -

ಬೆಳಗಾವಿ: ರಾಜ್ಯರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಸಿಡಿಯಲ್ಲಿದ್ದ ಯುವತಿ ಅಪಹರಣವಾಗಿರುವುದಾಗಿ ಆಕೆಯ ತಂದೆ ಬೆಳಗಾವಿ ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ.

ಮಾರ್ಚ್ 2 ರಿಂದ ನನ್ನ ಮಗಳು ನಾಪತ್ತೆಯಾಗಿದ್ದಾಳೆ. ನನ್ನ ಮಗಳನ್ನು ಅಪಹರಣ ಮಾಡಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಹಲವು ಆರೋಪ ಮಾಡಿದ್ದಾರೆ. ಮಗಳನ್ನು ಅಪಹರಿಸಿ ಬೆದರಿಸಿ ಅಶ್ಲೀಲ ದೃಶ್ಯ ಚಿತ್ರೀಕರಿಸಲಾಗಿದೆ ಎಂದು ಯುವತಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ನಮ್ಮ ಮಗಳನ್ನು ಹುಡುಕಿಕೊಡಿ. ನಮಗೆ ರಕ್ಷಣೆ ಕೊಡಿ. ಮಗಳನ್ನು ಯಾರೋ ಬೆದರಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಕಳೆದ 7 ದಿನಗಳಿಂದ ನಮ್ಮ ಮಗಳ ಜೊತೆ ಸಂಪರ್ಕಕ್ಕೆ ಸಿಗುತ್ತಿಲ್ಲ. ವಿಡಿಯೋ ಬಿಡುಗಡೆಯಾದ ದಿನ ಮಾತನಾಡಿದ್ದಳು ಎಂದು ಅವರು ಮಾಹಿತಿ ನೀಡಿದ್ದಾರೆನ್ನಲಾಗಿದೆ.

- Advertisement -

Latest News

error: Content is protected !!