Thursday, June 4, 2026
Homeಕರಾವಳಿಉಡುಪಿಕರಾವಳಿಗರೇ ಎಚ್ಚರ ಎಚ್ಚರ : ಉಡುಪಿಯಲ್ಲಿ ಸಕ್ರೀಯವಾಗಿದೆ ಮೂರ್ಛೆ ತಪ್ಪಿಸಿ ಕಳ್ಳತನ ಮಾಡುವ ಗ್ಯಾಂಗ್

ಕರಾವಳಿಗರೇ ಎಚ್ಚರ ಎಚ್ಚರ : ಉಡುಪಿಯಲ್ಲಿ ಸಕ್ರೀಯವಾಗಿದೆ ಮೂರ್ಛೆ ತಪ್ಪಿಸಿ ಕಳ್ಳತನ ಮಾಡುವ ಗ್ಯಾಂಗ್

- Advertisement -
- Advertisement -

ಉಡುಪಿ: ಫಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಬಾಟಲಿಯ ವಾಸನೆ ತೋರಿಸಿ ಮೂರ್ಛೆ ಹೋಗುವಂತೆ ಮಾಡಿ ಮನೆಯಲ್ಲಿರುವ ಚಿನ್ನಾಭರಣ ಗಳನ್ನು ದೋಚುವ  ಮಹಿಳೆಯರ ಗುಂಪೊಂದು ಉಡುಪಿ ನಗರದಲ್ಲಿ ಸಕ್ರೀಯವಾಗಿದೆ.

ಮಣಿಪಾಲ ಪೊಲೀಸರು ಈ ಬಗ್ಗೆ ಪ್ರಕಟಣೆ ನೀಡಿದ್ದು, ಐದರಿಂದ ಆರು ಮಂದಿ ಮಹಿಳೆಯರು ಕೂಡಿಕೊಂಡು ಫಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಫಿನಾಯಿಲ್ ನಂತೆ ಇರುವ ಬಾಟಲಿಯ ವಾಸನೆ ತೋರಿಸಿ ಮೂರ್ಛೆ ಹೋಗುವಂತೆ ಮಾಡಿ ಮನೆಯಲ್ಲಿರುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಇಂಥವರು ಯಾರಾದರೂ ಅಪರಿಚಿತರು ಸಂಶಯಾಸ್ಪದವಾಗಿ ತಮ್ಮ ಮನೆ ಮುಂದೆ ಓಡಾಡಿಕೊಂಡಿದ್ದರೆ ಅಂಥವರು ಕಂಡುಬಂದರೆ ಅವರಿಂದ ದೂರವಿದ್ದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದಿದ್ದಾರೆ

- Advertisement -

Latest News

error: Content is protected !!