Wednesday, June 3, 2026
Homeತಾಜಾ ಸುದ್ದಿಅಡುಗೆ ಮಾಡದೆ ಟಿವಿ ನೋಡುತ್ತಲೇ ಕುಳಿತ ಅತ್ತೆ: ಕೋಪಗೊಂಡ ಸೊಸೆ ಮಾಡಿದ್ದೇನು ಗೊತ್ತೇ .?

ಅಡುಗೆ ಮಾಡದೆ ಟಿವಿ ನೋಡುತ್ತಲೇ ಕುಳಿತ ಅತ್ತೆ: ಕೋಪಗೊಂಡ ಸೊಸೆ ಮಾಡಿದ್ದೇನು ಗೊತ್ತೇ .?

- Advertisement -
- Advertisement -

ಲಕ್ನೋ: ಉತ್ತರ ಪ್ರದೇಶದ ಗೋರಕ್ಪುರದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ನವವಿವಾಹಿತ ಮಹಿಳೆಯೊಬ್ಬಳು 112ಗೆ ಕರೆ ಮಾಡಿ ಮನೆಗೆ ಪೊಲೀಸರನ್ನು ಕರೆಸಿದ್ದಾಳೆ. 112ಕ್ಕೆ ಕರೆ ಮಾಡಿದ ಮಹಿಳೆ, ತನ್ನ ಅತ್ತೆ ಹಳಸಿದ ಆಹಾರ ನೀಡ್ತಾಳೆಂದು ದೂರಿದ್ದಾಳೆ.

ಸದಾ ಟಿವಿ ನೋಡುವ ಅತ್ತೆ ಹಿಂದಿನ ದಿನದ ಆಹಾರ ನೀಡ್ತಾಳೆ. ಇದ್ರಿಂದ ನನ್ನ ಆರೋಗ್ಯ ಹದಗೆಡುತ್ತಿದೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ. ಮಹಿಳೆ ಆರೋಪ ಕೇಳಿದ ಪೊಲೀಸರೂ ದಂಗಾಗಿದ್ದಾರೆ. ಇತ್ತ ಅತ್ತೆ ಇದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ನಾನು ತಾಜಾ ಆಹಾರವನ್ನು ಸೊಸೆಗೆ ನೀಡುತ್ತೇನೆ. ಆದ್ರೆ ಸೊಸೆ ಸದಾ ಮೊಬೈಲ್ ನಲ್ಲಿ ಸಮಯ ಕಳೆಯುತ್ತಾಳೆಂದು ಪ್ರತ್ಯಾರೋಪ ಮಾಡಿದ್ದಾಳೆ.

ಅತ್ತೆ ಹಾಗೂ ಸೊಸೆ ಇಬ್ಬರೇ ಮನೆಯಲ್ಲಿ ವಾಸ ಮಾಡ್ತಿದ್ದಾರೆ. ಗಂಡಸರು ಕೆಲಸದ ಕಾರಣಕ್ಕೆ ಮನೆಯಿಂದ ದೂರವಿದ್ದಾರೆ. ಪ್ರತಿ ದಿನ ಅತ್ತೆ-ಸೊಸೆ ಮಧ್ಯೆ ಗಲಾಟೆ ನಡೆಯುತ್ತದೆ ಎಂದು ಅಕ್ಕಪಕ್ಕದವರು ಹೇಳಿದ್ದಾರೆ. ಗಲಾಟೆ ಮುಂದುವರಿಸದೆ ಬೇಗ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ.

- Advertisement -

Latest News

error: Content is protected !!