Thursday, June 4, 2026
Homeತಾಜಾ ಸುದ್ದಿಬೆಳ್ತಂಗಡಿಯ ಅನ್ನಪೂರ್ಣ ಮೆಟಲ್ಸ್ ನ ಮಾಲೀಕ ರಮಾನಂದ ಸಾಲ್ಯಾನ್ ನಿಧನ

ಬೆಳ್ತಂಗಡಿಯ ಅನ್ನಪೂರ್ಣ ಮೆಟಲ್ಸ್ ನ ಮಾಲೀಕ ರಮಾನಂದ ಸಾಲ್ಯಾನ್ ನಿಧನ

- Advertisement -
- Advertisement -

ಬೆಳ್ತಂಗಡಿ: ಹಿರಿಯ ಉದ್ಯಮಿ ಹಾಗೂ ಸಮಾಜ ಸೇವಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ರಮಾನಂದ ಸಾಲ್ಯಾನ್ ಅವರು ನಿಧನರಾಗಿದ್ದಾರೆ. ಇಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರ ವಿಧಿವಶರಾಗಿದ್ದಾರೆ.

ಬೆಳ್ತಂಗಡಿ ಅನ್ನಪೂರ್ಣ ಮೆಟಲ್ಸ್ ಹಾಗೂ ರಾಜರಾಮ ಏಜೆನ್ಸಿಯ ಮಾಲೀಕರೂ ಆಗಿದ್ದ ಇವರು ಶ್ರೀನಾರಾಯಣ ಗುರುಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷರಾಗಿದ್ದರು. ಹಾಗೇ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಲಾಪ್ರೇಮಿಯಾಗಿದ್ದ ಇವರು ಆಶಾ ಸಾಲಿಯಾನ್ ಪ್ರತಿಷ್ಟಾನವನ್ನು ಸ್ಥಾಪಿಸಿ ಸಂಗೀತ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಮೃತರು ಪುತ್ರ ರಾಘೇಶ್, ಮಗಳು ರೇಣು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!