Saturday, June 6, 2026
Homeತಾಜಾ ಸುದ್ದಿನೆರಿಯ ಅಣಿಯೂರು ಶಿರಾಡಿ, ಪಿಲಿಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನ ಬಯಲು ಕ್ಷೇತ್ರಕ್ಕೆ ರಕ್ಷಿತ್ ಶಿವರಾಂ...

ನೆರಿಯ ಅಣಿಯೂರು ಶಿರಾಡಿ, ಪಿಲಿಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನ ಬಯಲು ಕ್ಷೇತ್ರಕ್ಕೆ ರಕ್ಷಿತ್ ಶಿವರಾಂ ಭೇಟಿ

- Advertisement -
- Advertisement -

ನೆರಿಯ: ಶಿರಾಡಿ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಬಯಲು ನೆರಿಯಾ ಇಲ್ಲಿಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ರವರು ಭೇಟಿ ನೀಡಿದರು.

ದೈವಸ್ಥಾನದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಿತಿಯವರಿಂದ ಮಾಹಿತಿ ಪಡೆದು ಶೀಘ್ರವಾಗಿ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸುವಂತೆ ಸೂಚಿಸಿ ಕ್ಷೇತ್ರದ ಅಭಿವೃದ್ಧಿಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ದೊಂಪದಬಲಿ ಉತ್ಸವ ಸಮಿತಿ ಅಧ್ಯಕ್ಷರಾದ ವಸಂತ ಪೂಜಾರಿ ಬಯಲು ಬಸ್ದಿ, ಕಾರ್ಯದರ್ಶಿ ಅಶೋಕ್ ಬಯಲು, ಕಮಲಾಕ್ಷ ಗೌಡ, ಕೊರಗಪ್ಪ ಗೌಡ, ಯಶೋಧರ ಪೂಜಾರಿ ಚಾರ್ಮಾಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

Latest News

error: Content is protected !!