Wednesday, June 24, 2026
Homeಕರಾವಳಿವಿಟ್ಲ: ಟಿಕ್ ಟಾಕ್ ನ ಹಾಸ್ಯ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ ಕಮಲಜ್ಜಿ ನಿಧನ

ವಿಟ್ಲ: ಟಿಕ್ ಟಾಕ್ ನ ಹಾಸ್ಯ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ ಕಮಲಜ್ಜಿ ನಿಧನ

- Advertisement -
- Advertisement -

ವಿಟ್ಲ: ಟಿಕ್ ಟಾಕ್ ನ ಹಾಸ್ಯ ವಿಡಿಯೋಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿ ವರ್ಗವನ್ನು ಪಡೆದಿದ್ದ, ಅನಂತಾಡಿ ಗ್ರಾಮದ ಮಾಮೇಶ್ವರ ಸಂಕೇಶ ನಿವಾಸಿ ಟಿಕ್ ಟಾಕ್ ಕಮಲಜ್ಜಿ ಯಾನೆ ಕಮಲ(85) ರವರು ಬುಧವಾರ ಸಂಜೆ ನಿಧನರಾಗಿದ್ದಾರೆ.

ಕಳೆದ ಒಂದು ವಾರದಿಂದ ಅನಾರೋಗ್ಯ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಂಜೆ ನಿಧನರಾಗಿದ್ದಾರೆ. ಮೃತರು ಆರು ಗಂಡು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸಹಿತ ಅಪಾರ ಬಂಧುಗಳನ್ನು, ಅಭಿಮಾನಿಗಳನ್ನು ಅಗಲಿದ್ದಾರೆ. ಟಿಕ್ ಟಾಕ್ ಸ್ಟಾರ್ ಧನರಾಜ್ ಜೊತೆ ಕಮಲಜ್ಜಿ 50ಕ್ಕೂ ಅಧಿಕ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದು, ಇವರ ಕುಟುಂಬವೇ ಟಿಕ್ ಟಾಕ್ ಫ್ಯಾಮಿಲಿ ಎಂದು ಹೆಸರು ಪಡೆದಿತ್ತು.

ತಮ್ಮ ಇಳಿವಯಸ್ಸಿನಲ್ಲೂ ಇವರು ಟಿಕ್ ಟಾಕ್ ವಿಡಿಯೋಗಳಲ್ಲಿ ತೋರುತ್ತಿದ್ದ ಅಭಿನಯ, ಮಾತಿನ ವೇಗ, ಮನೆಮಂದಿಯ ಜೊತೆ ಬೆರೆಯುತ್ತಿದ್ದ ದೃಶ್ಯಾವಳಿಗಳಿಂದಾಗಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಅವರು ಪಡೆದಿದ್ದರು. ಪ್ರಸೂತಿ ತಜ್ಞೆಯಾಗಿದ್ದ ಇವರು ಪರೋಪಕಾರ ಮನಸ್ಸಿನವರಾಗಿದ್ದರು.

- Advertisement -

Latest News

error: Content is protected !!