Sunday, June 7, 2026
Homeಕರಾವಳಿಬೆಂಗಳೂರಿನಲ್ಲಿ  ಬೆಳ್ತಂಗಡಿಯ ಮೀನಿನ ವ್ಯಾಪಾರಿಯ ಅಂಗಡಿಗೆ ನುಗ್ಗಿ ಪುಡಿ ರೌಡಿಯಿಂದ ದಾಂಧಲೆ ಪ್ರಕರಣ; ಘಟನೆಯನ್ನು ಖಂಡಿಸಿದ...

ಬೆಂಗಳೂರಿನಲ್ಲಿ  ಬೆಳ್ತಂಗಡಿಯ ಮೀನಿನ ವ್ಯಾಪಾರಿಯ ಅಂಗಡಿಗೆ ನುಗ್ಗಿ ಪುಡಿ ರೌಡಿಯಿಂದ ದಾಂಧಲೆ ಪ್ರಕರಣ; ಘಟನೆಯನ್ನು ಖಂಡಿಸಿದ ರಕ್ಷಿತ್ ಶಿವರಾಂ

- Advertisement -
- Advertisement -

ಬೆಳ್ತಂಗಡಿ; ಬೆಂಗಳೂರಿನಲ್ಲಿ ಮೀನಿನ ಅಂಗಡಿ ನಡೆಸುತ್ತಿರುವ ಬೆಳ್ತಂಗಡಿಯ ಸದಾಶಿವ ರವರ ಮೇಲೆ  ಹಪ್ತಕ್ಕಾಗಿ ಬೇಡಿಕೆ ಇಟ್ಟು  ಪುಡಿ ರೌಡಿಯೊಬ್ಬ ತಲವಾರ್ ಮೂಲಕ ದಾಳಿ ನಡೆಸಿದ ಪ್ರಕರಣವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಖಂಡಿಸಿದ್ದಾರೆ.

ಈ ಬಗ್ಗೆ ಬಾಣಸವಾಡಿ ಪೋಲಿಸ್ ಠಾಣೆಯ  ಅಧಿಕಾರಿಯೊಂದಿಗೆ ಮಾತನಾಡಿ ಮಾಹಿತಿಯನ್ನು ಪಡೆದುಕೊಂಡಿದ್ದು, ಅರೋಪಿಯನ್ನು ಈಗಾಗಲೇ  ಬಂಧಿಸಲಾಗಿದ್ದು . ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸ್ವಂತ ಉದ್ಯೋಗದ ಮೂಲಕ ಹಾಗೂ ಇನ್ನಿತರ ಕೆಲಸ ಕಾರ್ಯಗಳ ಮೂಲಕ ಬೆಂಗಳೂರಿನಲ್ಲಿ ದುಡಿಯುತ್ತಿರುವ ಕರಾವಳಿಯ ಬಂಧುಗಳಿಗೆ ರಕ್ಷಣೆ ನೀಡಬೇಕು ಎಂದು  ಬೆಂಗಳೂರು ನಗರ ಪೋಲಿಸ್ ಕಮಿಷನರ್ ಪ್ರತಾಪ್‌ ರೆಡ್ಡಿ ಯವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹಾಗೇ ಅಂಗಡಿ ಮಾಲೀಕರಾದ ಸದಾಶಿವ ರವರಿಗೆ ಕರೆ ಮಾಡಿ ಮಾತನಾಡಿ ಧೈರ್ಯವನ್ನು ತುಂಬಿ ಮತ್ತು ತಮ್ಮ ಸಂಪೂರ್ಣ ಸಹಕಾರ ಇರುವುದಾಗಿ ಭರವಸೆ ನೀಡಿದ್ದಾರೆ.

- Advertisement -

Latest News

error: Content is protected !!