Sunday, June 7, 2026
Homeಕರಾವಳಿಬೆಳ್ತಂಗಡಿ : ಪುಂಜಾಲಕಟ್ಟೆ ಪಿಎಸ್ಐ ವರ್ಗಾವಣೆ ಪ್ರಕರಣ:  ಪೊಲೀಸ್ ಇಲಾಖೆಗೆ ಅಭಿನಂದನೆ ತಿಳಿಸಿದ ರಕ್ಷಿತ್ ಶಿವಾರಾಂ

ಬೆಳ್ತಂಗಡಿ : ಪುಂಜಾಲಕಟ್ಟೆ ಪಿಎಸ್ಐ ವರ್ಗಾವಣೆ ಪ್ರಕರಣ:  ಪೊಲೀಸ್ ಇಲಾಖೆಗೆ ಅಭಿನಂದನೆ ತಿಳಿಸಿದ ರಕ್ಷಿತ್ ಶಿವಾರಾಂ

- Advertisement -
- Advertisement -

ಬೆಳ್ತಂಗಡಿ : ಜಾಗದ ವಿಚಾರವಾಗಿ ಕಳ್ಳತನ ಆರೋಪ ಹೊರಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ಸುತೇಶ್ ಅವರನ್ನು ಇಂದು ದಕ್ಷಿಣ ಕನ್ನಡ ಎಸ್ಪಿ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ. ಈ ವಿಚಾರವಾಗಿ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ನ ಹಾಗೂ ಯುವ ವಕೀಲರಾಗಿರುವ ರಕ್ಷಿತ್ ಶಿವರಾಂ ಅವರು ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ.

ಘಟನೆ ಬಗ್ಗೆ ಬುಧವಾರ ರಾಜ್ಯ ವಕೀಲರ ಸಂಘದ ಅಧ್ಯಕ್ಷರು , ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಫೋನ್ ಮೂಲಕ ಪಿಎಸ್ಐ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು.‌ ಅದಲ್ಲದೆ ಜಿಲ್ಲೆಯ ವಕೀಲರ ಸಂಘ ಕೂಡ ಪ್ರತಿಭಟನೆ ಮಾಡಿ ಕ್ರಮ ಕೈಗೊಳ್ಳಲು ಮನವಿ ಮಾಡಿತ್ತು ಇಂದು ಪಿಎಸ್ಐ ಸುತೇಶ್ ಅವರನ್ನು ದ.ಕ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

- Advertisement -

Latest News

error: Content is protected !!