Tuesday, December 5, 2023
Homeಕರಾವಳಿಉಡುಪಿಉಡುಪಿ: ಕೇಳಾರ್ಕಳಬೆಟ್ಟು ಚಿನ್ನದ ಆಭರಣ ತಯಾರಿಕಾ ಸಂಸ್ಥೆಯಲ್ಲಿ ಕಳ್ಳತನ ಪ್ರಕರಣ; ಆರೋಪಿಯಿಂದ 7 ಲಕ್ಷ ಮೌಲ್ಯದ...

ಉಡುಪಿ: ಕೇಳಾರ್ಕಳಬೆಟ್ಟು ಚಿನ್ನದ ಆಭರಣ ತಯಾರಿಕಾ ಸಂಸ್ಥೆಯಲ್ಲಿ ಕಳ್ಳತನ ಪ್ರಕರಣ; ಆರೋಪಿಯಿಂದ 7 ಲಕ್ಷ ಮೌಲ್ಯದ ಚಿನ್ನಾಭರಣ ವಶ

- Advertisement -
- Advertisement -

ಉಡುಪಿ: ಇಲ್ಲಿನ ಕೇಳಾರ್ಕಳಬೆಟ್ಟು ಸ್ವರ್ಣೋದ್ಯಮ ಚಿನ್ನದ ಆಭರಣ ತಯಾರಿಕಾ ಸಂಸ್ಥೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಮಲ್ಪೆ ಪೊಲೀಸರು ಆರೋಪಿಯಿಂದ 7 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.


ಪಶ್ಚಿಮ ಬಂಗಾಳ ಮೂಲದ ಸುಭಾಶಿಷ್ ಬೇರಾ ಬಂಧಿತ ಆರೋಪಿ. ನವೆಂಬರ್ 25 ರಂದು ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಆರೋಪಿ ಕೇಳಾರ್ಕಳಬೆಟ್ಟು ಸ್ವರ್ಣೋದ್ಯಮ ಚಿನ್ನದ ಆಭರಣ ತಯಾರಿಕಾ ಸಂಸ್ಥೆಯಲ್ಲಿ 126 ಗ್ರಾಂ ಚಿನ್ನದ ಆಭರಣ ಕಳ್ಳತನ ಮಾಡಿದ್ದ .

ಪ್ರಕರಣವನ್ನು ಭೇದಿಸುವ  ಕಾರ್ಯಾಚರಣೆಯಲ್ಲಿ ಮಲ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಬಿ ಹಾದಿಮನಿ ಅವರೊಂದಿಗೆ ಠಾಣಾ ಸಿಬ್ಬಂದಿಯಾದ ಎ ಎಸ್ಐ ರವಿಚಂದ್ರ , ಹೆಚ್ ಸಿ ಸುರೇಶ್, ಹೆಚ್ ಸಿ ಜಯರಾಮ, ಹೆಚ್.ಸಿ ಸಂತೋಷ ಎಸ್ , ಹೆಚ್.ಸಿ ಲೋಕೇಶ್ , ಪಿಸಿ ಲಕ್ಷ್ಮಣ, ಪಿಸಿ ಜಗದೀಶ, ಪಿಸಿ ಸಚಿನ್ ಮಹೆಚ್ ಸಿ ಮಾಲತಿ,ಪಿಸಿ ಇಂದ್ರೇಶ್, ಜೀಪು ಚಾಲಕರಾದ ಎ ಹೆಚ್ ಸಿ ಮಹಾಬಲೇಶ್ವರ ,ಎ.ಹೆಚ್ ಸಿ ಸಲೀಂವುಲ್ಲಾ ಭಾಗವಹಿಸಿದ್ದಾರೆ.

- Advertisement -
spot_img

Latest News

error: Content is protected !!