Wednesday, June 24, 2026
Homeತಾಜಾ ಸುದ್ದಿಪಬ್ಲಿಕ್ ಟಿವಿಗೆ ಪ್ರೆಸ್ ಮೀಟ್ ಮೂಲಕ ಉತ್ತರ ಕೊಟ್ಟ ನಟ ರಕ್ಷಿತ್ ಶೆಟ್ಟಿ : ಸುಮಾರು...

ಪಬ್ಲಿಕ್ ಟಿವಿಗೆ ಪ್ರೆಸ್ ಮೀಟ್ ಮೂಲಕ ಉತ್ತರ ಕೊಟ್ಟ ನಟ ರಕ್ಷಿತ್ ಶೆಟ್ಟಿ : ಸುಮಾರು 1 ಗಂಟೆಗಳ ಕಾಲದ ಮಾಧ್ಯಮ ಗೋಷ್ಟಿಯಲ್ಲಿ ಸಿಂಪಲ್ ಸ್ಟಾರ್ ಹೇಳಿದ್ದೇನು?

- Advertisement -
- Advertisement -

ಬೆಂಗಳೂರು : ತಮ್ಮ ವಿರುದ್ಧ  ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮಗಳ ಬಗ್ಗೆ ನಟ ರಕ್ಷಿತ್ ಶೆಟ್ಟಿ ಮೊನ್ನೆಯಷ್ಟೇ ಬೇಸರವನ್ನು ಹೊರ ಹಾಕಿದ್ದರು. ಅಲ್ಲದೇ ಜುಲೈ 11 ರಂದು ಇದಕ್ಕೆ ಸರಿಯಾದ ಉತ್ತರ ನೀಡುತ್ತೇನೆ ಎಂದು ಸಿಂಪಲ್ ಸ್ಟಾರ್ ಹೇಳಿಕೊಂಡಿದ್ದರು. ಅದರಂತೆ ಇವತ್ತು ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ  ರಿಚರ್ಡ್ ಆಂಟನಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅದರ ಬೆನ್ನಲ್ಲೇ ಇಂದು ರಕ್ಷಿತ್ ಶೆಟ್ಟಿ ಮಾಧ್ಯಮ ಗೋಷ್ಟಿ ನಡೆಸಿದ್ದಾರೆ.

ಇಂದಿನ ಪ್ರೆಸ್ ಮೀಟ್ ನಲ್ಲಿ ರಕ್ಷಿತ್ ಶೆಟ್ಟಿ ಪ್ರಮುಖವಾಗಿ ಪಬ್ಲಿಕ್ ಟಿವಿಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಅಂತಹದ್ದೊಂದು ಕಾರ್ಯಕ್ರಮ ಯಾಕೆ ಪ್ರಸಾರವಾಯಿತು ಎನ್ನುವ ಬಗ್ಗೆ ವಿವರಿಸಿದ್ದಾರೆ. ಇದೆಲ್ಲದರ ಜೊತೆ ತಮಗಾದ ಕೆಲವೊಂದು ಕಹಿ ಘಟನೆಗಳನ್ನು ರಕ್ಷಿತ್ ಹಂಚಿಕೊಂಡಿದ್ದಾರೆ.ಕೆಲಸದಿಂದ ನಾನು ಎಲ್ಲಾ ಟೀಕೆಗಳಿಗೆ ಉತ್ತರ ನೀಡುತ್ತೇನೆ ಎಂದಿರುವ ರಕ್ಷಿತ್ ವೈಯಕ್ತಿಕ ದ್ವೇಷದ ಕಾರಣಕ್ಕೆ ಇಲ್ಲ ಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ,

ಅಲ್ಲದೇ ಮಾಧ್ಯಮ ಅನ್ನೋದು ಅತ್ಯಂತ ಪ್ರಮುಖವಾದ ರಂಗ. ಇಲ್ಲಿ ಯಾರ ಕೈಯಿಗೆ ಪೆನ್ನು ಕೊಡಬೇಕೋ ಅವರ ಕೈಗೆ ಕೊಡಬೇಕು. ಪೆನ್ನು ಹಿಡಿದವನಿಗೆ ಬಳಸೋದು ಗೊತ್ತಿರಬೇಕು ಎಂದಿದ್ದಾರೆ.

- Advertisement -

Latest News

error: Content is protected !!