Thursday, May 16, 2024
Homeಕರಾವಳಿದ.ಕ.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮಗನಿಂದ NSUI ಕಾರ್ಯಧ್ಯಕ್ಷನ ಮೇಲೆ ಹಲ್ಲೆ

ದ.ಕ.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮಗನಿಂದ NSUI ಕಾರ್ಯಧ್ಯಕ್ಷನ ಮೇಲೆ ಹಲ್ಲೆ

spot_img
- Advertisement -
- Advertisement -

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದಲ್ಲಿ ಇತ್ತಿಚಿನ ದಿನಗಳಲ್ಲಿ ಭಿನ್ನಮತ ಸ್ಫೋಟಗೊಳ್ಳುತ್ತಿದ್ದು ಇದಕ್ಕೆ ಪ್ರಮುಖ ಕಾರಣ ಬೆಳ್ತಂಗಡಿಗೆ ಹೊಸ ಯುವ ನಾಯಕ ಹಾಗೂ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆಗಮಿಸಿ ಬಡಕುಟುಂಬಗಳಿಗೆ ಹಲವು ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ 2,500 ಕಿಟ್ ವಿತರಿಸಿದ್ದರು. ಈ ಕಿಟ್ ವಿತರಣೆಯಲ್ಲಿ ಯುವ ನಾಯಕ ರಕ್ಷಿತ್ ಶಿವರಾಂ ಜೊತೆ ದಕ್ಷಿಣ ಕನ್ನಡ ಜಿಲ್ಲಾ NSUI ಕಾರ್ಯಧ್ಯಕ್ಷ ಪವನ್ ಸಾಲ್ಯಾನ್ ಕೂಡ ಭಾಗವಹಿಸಿದ್ದು. ಈ ಕುರಿತ ರಾಜಕೀಯ ದ್ವೇಷದಿಂದ ಪವನ್ ಸಾಲ್ಯಾನ್ ರ ಕಾಲರ್ ಪಟ್ಟಿ ಹಿಡಿದು ಹಲ್ಲೆ ಮಾಡಿ ಕಾರ್ಯಕ್ರಮದಿಂದ ಹೊರದಬ್ಬಿದ್ದ ಘಟನೆ ಬೆಳ್ತಂಗಡಿಯ ಗುರುನಾರಾಯಣ ಸಭಾಂಗಣದಲ್ಲಿ ನಡೆದಿದೆ.

ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಇಂದು ರಕ್ತದಾನ ಶಿಬಿರವನ್ನು ಬೆಳ್ತಂಗಡಿ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ವತಿಯಿಂದ ಹಮ್ಮಿ ಕೊಳ್ಳಲಾಗಿತ್ತು. ಈ ರಕ್ತದಾನ ಶಿಬಿರದಲ್ಲಿ NSUI ಜಿಲ್ಲಾ ಕಾರ್ಯಧ್ಯಕ್ಷ ಪವನ್ ಸಲ್ಯಾನ್ ಕೂಡ ಭಾಗಿಯಾಗಿದ್ದರು. ಪವನ್ ಸಾಲ್ಯಾನ್ ತಮ್ಮ ಪಕ್ಷದ ಕಾರ್ಯಕರ್ತರ ಜೊತೆ 11 ಗಂಟೆ ಸುಮಾರಿಗೆ ಮಾತಾನಾಡುತ್ತಿದ್ದ ಸಂಧರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಮತ್ತು ಅವರ ಮಗ ಅಭಿನಂದನ್ ಹರೀಶ್ ಕುಮಾರ್ ಬಂದು ಏಕಾಏಕಿ ಕಾಲರ್ ಪಟ್ಟಿ ಹಿಡಿದು ಹಲ್ಲೆ ಮಾಡಿ ನೀನು ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಆಗಮಿಸಬಾರದು ನಿನ್ನನ್ನು ಪಕ್ಷದ ಹುದ್ದೆಯಿಂದ ತೆಗೆದುಹಾಕುತ್ತೇವೆ ಎಂದು ಬೆದರಿಕೆ ಹಾಕಿ ಕಾರ್ಯಕ್ರಮದಿಂದ ಹೊರದಬ್ಬಿದ್ದಾರೆ. ಇದರಿಂದ ನೊಂದ ಪವನ್ ಸಾಲ್ಯಾನ್ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮಾಹಿತಿ ನೀಡಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಇಬ್ಬರು ಕೆಪಿಸಿಸಿ ಕಾರ್ಯಧ್ಯಕ್ಷರಿಗೆ NSUI ಲೇಟರ್ ಹೆಡ್ ನಲ್ಲಿ ದೂರು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಾಂಗ್ರೆಸ್ ಗೆ ಹೊಸ ನಾಯಕ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಮಗ ಹೈ ಕೋರ್ಟ್ ವಕೀಲ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಯಾಗಿರುವ ರಕ್ಷಿತ್ ಶಿವರಾಂ ಬಂದು ಉತ್ತಮ ಸಮಾಜ ಸೇವೆ ಮಾಡುತ್ತಿದ್ದು ಇವರೊಂದಿಗೆ ಬೆಳ್ತಂಗಡಿಯ ಹಲವು ಯುವಕರು ಜೊತೆಯಲ್ಲಿದ್ದು ಕೆಲಸ ಮಾಡುತ್ತಿದ್ದು ಮುಂದೆ ಈತನನ್ನು ಬಿಟ್ಟಾರೆ ಬೆಳ್ತಂಗಡಿಯ ನಾಯಕ ಅಗಿ ಬಿಡುತ್ತಾನೆ ಎಂದು ಕೆರಳಿದ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಕೆಲವರು ಆತನನನ್ನು ಓಡಿಸಲು ಜೊತೆಯಲ್ಲಿರುವ ಯುವಕರಿಗೆ ಒಂದೊಂದಾಗಿ ತೊಂದರೆ ನೀಡಿ ದ್ವೇಷ ರಾಜಕೀಯ ಸಾಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಗುಸು ಗುಸು ಆಗುತ್ತಿದೆ.

ಕ್ತದಾನ ಶಿಬಿರ

ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ , ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್ ,ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ಧ್ರುವ ನಾರಾಯಣ್ ಗೆ ದೂರು ನೀಡಿದ ಪ್ರತಿ ಲಭ್ಯ :

ದೂರಿನ ಸಾರಾಂಶಗಳು : “ಕರ್ನಾಟಕ ಕಾಂಗ್ರೆಸ್ ಸಮಿತಿ ದಿನಾಂಕ 11-07-2021 ರಂದು ನಡೆದ ಕಾಂಗ್ರೆಸ್ ಪಕ್ಷದ ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ದ.ಕ.ಜಿಲ್ಲಾ NSUI ಕಾರ್ಯಧ್ಯಕ್ಷನಾದ ನಾನು ಭಾಗವಹಿಸಿದ್ದು , ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಹಾಗೂ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಹಾಗೂ ಅವರ ಮಗ ಅಭಿನಂದನ್ ಹರೀಶ್ ಕುಮಾರ್ ರವರು ನನ್ನ ಮೇಲೆ ಹಲ್ಲೆ ನಡೆಸಿ, ಅವ್ಯಾಚ ಶಬ್ದದಿಂದ ನಿಂದಿಸಿ, ಕಾಲರ್ ಪಟ್ಟಿ ಹಿಡಿದು ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಎದುರು ಕಾರ್ಯಕ್ರಮದಿಂದ ಹೊರ ತಳ್ಳಿದರು. ಇನ್ನೂ ಮುಂದೆ ನೀನು ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಆಗಮಿಸಬಾರದೆಂದು ಹೇಳಿ ಹಾಗೂ ನಿನ್ನನ್ನು ಪಕ್ಷದ ಹುದ್ದೆಯಿಂದ ತೆಗೆದು ಹಾಕುತ್ತೇನೆ ಎಂದು ಹೇಳಿ ಬೆದರಿಕೆ ಒಡ್ಡಿರುತ್ತಾರೆ. ಆದ್ದರಿಂದ ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿ ಕೊಡಬೇಕಾಗಿ ವಿನಂತಿ ” ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ಎಂಬ ಲೇಟರ್ ಹೆಡ್ ನಿಂದ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!