Friday, April 26, 2024
HomeUncategorizedಇಸ್ಲಾಂ ಧರ್ಮಕ್ಕೆ ಮತಾಂತರವಾದ ರಾಖಿ ಸಾವಂತ್; ಕಾಂಟ್ರವರ್ಸಿ ಕ್ವೀನ್ ನ ಈಗದ ಹೆಸರೇನು?

ಇಸ್ಲಾಂ ಧರ್ಮಕ್ಕೆ ಮತಾಂತರವಾದ ರಾಖಿ ಸಾವಂತ್; ಕಾಂಟ್ರವರ್ಸಿ ಕ್ವೀನ್ ನ ಈಗದ ಹೆಸರೇನು?

spot_img
- Advertisement -
- Advertisement -

ಮುಂಬೈ : ಕಾಂಟ್ರವರ್ಸಿ ಕ್ವೀನ್ ನಟಿ ರಾಖಿ ಸಾವಂತ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎನ್ನಲಾಗಿದೆ. ಇನ್ನು ರಾಖಿ  ಹಾಗೂ ಮೈಸೂರು ಮೂಲದ ಆದಿಲ್ ದುರಾನಿ ಅವರ ರಹಸ್ಯ ಮದುವೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ವಿವಾಹ ಹಿನ್ನೆಲೆಯಲ್ಲಿ ರಾಖಿ ಸಾವಂತ್ ಅವರು, ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ರಾಖಿಯಿಂದ ಫಾತಿಮಾಗೆ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮದುವೆಯ ಸುದ್ದಿಯನ್ನು ಆದಿಲ್ ದುರಾನಿ ತಳ್ಳಿ ಹಾಕಿದ್ದಾರೆ.

ತನ್ನ ಗೆಳೆಯ, ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಜೊತೆಗೆ ವಿವಾಹವಾಗುವ ವೇಳೆ  ರಾಖಿ ಸಾವಂತ್ ತನ್ನ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದಾರೆ. ವಿಶೇಷ ಮದುವೆ ಪ್ರಮಾಣಪತ್ರದ ಪ್ರಕಾರ, ರಾಖಿ ಸಾವಂತ್ ಅವರು ಫಾತಿಮಾ ಆಗಿ ಬದಲಾಗಿದ್ದಾರೆ. ಇದಕ್ಕೂ ಮೊದಲು, ಬುಧವಾರ ರಾಖಿ ವಧುವಿನ ಡ್ರೆಸ್‌ನಲ್ಲಿ ಮತ್ತು ಆದಿಲ್ ಖಾನ್ ಅವರು ವರನ ಡ್ರೆಸ್‌ನಲ್ಲಿರುವ ಫೋಟೋ ವೈರಲ್ ಆಗಿತ್ತು. ಅಲ್ಲದೇ, ಅವರಿಬ್ಬರೂ ಮದುವೆಯಾಗಿದ್ದಾರೆಂಬುದು ಖಚಿತವಾಗಿತ್ತು. ಆದರೆ, ಈ ಎಲ್ಲಾ ಬೆಳವಣಿಗೆಗಳನ್ನು ಆದಿಲ್ ಅವರು ಅಲ್ಲಗಳೆದಿದ್ದಾರೆ.

- Advertisement -
spot_img

Latest News

error: Content is protected !!