Friday, May 24, 2024
Homeತಾಜಾ ಸುದ್ದಿಆಕಾಶಕ್ಕೆ ಟಾರ್ಚ್ ಬಿಡುವುದರಿಂದ ಕೊರೋನಾ ಸಮಸ್ಯೆ ಬಗೆಹರಿಯುವುದಿಲ್ಲ

ಆಕಾಶಕ್ಕೆ ಟಾರ್ಚ್ ಬಿಡುವುದರಿಂದ ಕೊರೋನಾ ಸಮಸ್ಯೆ ಬಗೆಹರಿಯುವುದಿಲ್ಲ

spot_img
- Advertisement -
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಏಪ್ರಿಲ್​ 5 ರಂದು ರಾತ್ರಿ 9ಗಂಟೆಗೆ ಮನೆಯಲ್ಲಿ ಮೊಂಬತ್ತಿ ಹಚ್ಚುವಂತೆ ಕರೆ ನೀಡಿದ್ದು, ಇದಕ್ಕೆ ಭಾರಿ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಕಿಡಿ ಕಾರಿದ್ದಾರೆ.

ಮನೆಯಲ್ಲಿ ಕ್ಯಾಂಡಲ್​ ಲೈಟ್​ ಅಥವಾ ಮೊಬೈಲ್​ ಟಾರ್ಚ್​​ ಬೆಳಗಿಸುವುದರಿಂದ ಕೊರೊನಾ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಬೇರೆ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ಹೆಚ್ಚು ಕೊರೊನಾ ಟೆಸ್ಟ್​ ನಡೆಯುತ್ತಿಲ್ಲ. ಚಪ್ಪಾಳೆ ಹೊಡೆಯುವುದರಿಂದ ಆಕಾಶಕ್ಕೆ ಟಾರ್ಚ್​ ಬಿಡುವುದರಿಂದ ದೇಶದಲ್ಲಿ ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

- Advertisement -
spot_img

Latest News

error: Content is protected !!