Sunday, May 5, 2024
Homeಮನರಂಜನೆಮನೆ ಕೆಲಸದಾಕೆಯ ಬರ್ತಡೇಗೆ ತಾವೇ ಕೇಕ್ ತಯಾರಿಸಿ, ಹುಟ್ಟುಹಬ್ಬ ಆಚರಿಸಿದ ರಾಧಿಕಾ ಪಂಡಿತ್

ಮನೆ ಕೆಲಸದಾಕೆಯ ಬರ್ತಡೇಗೆ ತಾವೇ ಕೇಕ್ ತಯಾರಿಸಿ, ಹುಟ್ಟುಹಬ್ಬ ಆಚರಿಸಿದ ರಾಧಿಕಾ ಪಂಡಿತ್

spot_img
- Advertisement -
- Advertisement -

ಬೆಂಗಳೂರು : ನಟಿ ರಾಧಿಕಾ ಪಂಡಿತ್ ಅವರು ಕೇವಲ  ನಟಿಯಾಗಿ ಇಷ್ಟವಾಗೋದು ಮಾತ್ರವಲ್ಲದೇ ನಿಜ ಜೀವನದಲ್ಲೂ ಅವರನ್ನು ಜನ ತೆರೆ ಮೇಲೆ ಇಷ್ಟಪಟ್ಟಂತೆ, ಇಷ್ಟಪಡೋಕೆ ಕಾರಣ ಹಲವಾರಿದೆ. ಅದರಲ್ಲಿ ಮೊದಲನೇಯದ್ದು ಅವರ ಸರಳತೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುವ ಅವರ ಗುಣ.

ಇದೀಗ ರಾಧಿಕಾ ಪಂಡಿತ್ ಅವರು ತನ್ನದೆಷ್ಟು ಸರಳ ವ್ಯಕ್ತಿತ್ವ ಅನ್ನೋದನ್ನು ತೋರಿಸಿದ್ದಾರೆ. ತಮ್ಮ ಮನೆಯಲ್ಲಿ ಕಳೆದ 8 ವರ್ಷಗಳಿಂದ ಮನೆ ಕೆಲಸದವರಾಗಿ ಕೆಲಸ ಮಾಡುತ್ತಿರುವ ಗೀತಾ ಅನ್ನೋರ ಬರ್ತಡೇಯನ್ನು  ರಾಧಿಕಾ ಆಚರಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗೀತಾ ಅವರ ಬರ್ತಡೇ ಇತ್ತು. ಅದಕ್ಕಾಗಿ ಸ್ವತಃ ರಾಧಿಕಾ ಅವರೇ ಕೇಕ್ ಕೂಡ ತಯಾರಿಸಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

 ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ ರಾಧಿಕಾ. ಅವರೊಂದಿಗಿರುವ ಫೋಟೋ ಹಂಚಿಕೊಂಡಿರುವ ರಾಧಿಕಾ, ಇವರು ಗೀತಾ, ಕಳೆದ 8 ವರ್ಷಗಳಿಂದ ನಮಗೆ ಮನೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಇವರು ನಮ್ಮ ಕುಟುಂಬವಿದ್ದಂತೆ. ನಾಮ್ಮೆಲ್ಲರ ಬಗ್ಗೆ ಇವರು ಕಾಳಜಿ ವಹಿಸುತ್ತಾರೆ. ಹಾಗಾಗಿ ಇಂತಹ ಕಷ್ಟದ ಸಂದರ್ಭದಲ್ಲಿ ನಾವು ಅವರ ಬಗ್ಗೆ ಕಾಳಜಿ ತೋರಬೇಕು. ಖಂಡಿತವಾಗಿ ಯಾರೂ ಕೂಡ ನಿಮ್ಮ ಮನೆಯಲ್ಲಿ ಈ ರೀತಿ ನಿಮಗೆ ಸಹಾಯ ಮಾಡುವವರನ್ನು  ನಿರ್ಲಕ್ಷ್ಯ ಮಾಡಬೇಡಿ. ಅದರಲ್ಲೂ ಈ ಸಮಯದಲ್ಲಿ ಅವರ ಬಗ್ಗೆ ನಿರ್ಲಕ್ಷ್ಯ ಬೇಡವೇ ಬೇಡ. ಅವರು ನಮಗೆ ಅತ್ಯಮೂಲ್ಯವಾದವರು ಅಂತಾ ರಾಧಿಕಾ ಹೇಳಿದ್ದಾರೆ. ಆ ಮೂಲಕ ಕೊರೊನಾದ ಈ ಸಂಕಷ್ಟದ ಸಮಯದಲ್ಲಿ ನಿಮ್ಮ ನಿಮ್ಮ ಮನೆಯಲ್ಲಿ ಕೆಲಸದವರಾಗಿ ದುಡಿದು ನಿಮಗೆ ಸಹಾಯ ಮಾಡುತ್ತಿರುವವರನ್ನು ಮರೆಯಬೇಡಿ ಅಂತಾ ಎಲ್ಲರಿಗೂ ಒಂದೊಳ್ಳೆ ಮೆಸೇಜ್ ಕೊಟ್ಟಿದ್ದಾರೆ ಮಿಸೆಸ್ ರಾಮಾಚಾರಿ.

This is Geeta… she has been our house help since 8yrs now. She is like our family, takes care of us so well, now…

Posted by Radhika Pandit on Thursday, 2 July 2020

- Advertisement -
spot_img

Latest News

error: Content is protected !!