Thursday, June 4, 2026
Homeತಾಜಾ ಸುದ್ದಿಪಿಎಂ ಮೋದಿ ಮನಗೆದ್ದ ಮಂಡ್ಯದ ಗಂಡು ಕಾಮೇಗೌಡರಿಗೆ ಸಿಎಂ ಕಡೆಯಿಂದ ಸಿಕ್ತು ಬಂಪರ್ ಗಿಫ್ಟ್..!

ಪಿಎಂ ಮೋದಿ ಮನಗೆದ್ದ ಮಂಡ್ಯದ ಗಂಡು ಕಾಮೇಗೌಡರಿಗೆ ಸಿಎಂ ಕಡೆಯಿಂದ ಸಿಕ್ತು ಬಂಪರ್ ಗಿಫ್ಟ್..!

- Advertisement -
- Advertisement -

ಬೆಂಗಳೂರು :ಪ್ರಧಾನಿ ಮನ ಗೆದ್ದಿರುವ ಅಧುನಿಕ ಭಗೀರಥ, ಕೆರೆಗಳ ಮನುಷ್ಯ ಎಂದೇ ರಾಜ್ಯದಲ್ಲಿ ಪ್ರಖ್ಯಾತವಾಗಿರುವ ಕಾಮೇಗೌಡರ ಸಾಧನೆಗೆ ಸಿಎಂ ಯಡಿಯೂರಪ್ಪ ಸೂಚನೆಯ ಮೇರೆಗೆ ಕೆ ಎಸ್ ಆರ್ ಟಿ ಸಿ ಅಪರೂಪದ ಗೌರವ ನೀಡಿದೆ. ಅದೇ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಸುಗಳಲ್ಲಿ ಜೀವಿತಾವಧಿಯವರೆಗೂ ಉಚಿತವಾಗಿ ಸಂಚರಿಸಲು ಬಸ್ ಪಾಸ್ ನೀಡಿ, ಗೌರವಿಸಿದೆ.


ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಮುಖಿ ಕೆಲಸದಲ್ಲಿ ಮಗ್ನರಾಗಿರುವ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರನ್ನು ಜು.28ರಂದು ನಡೆದ ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದರು. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶಿಷ್ಟ ರೀತಿಯಲ್ಲಿ ಕಾಮೇಗೌಡರನ್ನು ಗೌರವಿಸಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಎಲ್ಲಾ ಮಾದರಿಯ ಬಸ್ಸುಗಳಲ್ಲಿ ಅವರ ಜೀವಿತಾವಧಿಯವರೆಗೆ ಉಚಿತವಾಗಿ ಪ್ರಯಾಣಿಸಲು ಬಸ್ ಪಾಸನ್ನು ನೀಡಲು ಅನುಮತಿಸಲಾಗಿದೆ ಎಂದು ಕೆ ಎಸ್ ಆರ್ ಟಿ‌‌ ಸಿಯ ವ್ಯವಸ್ಥಾಪಕ‌ ನಿರ್ದೇಶಕ ಶಿವಯೋಗಿ ಸಿ.ಕಳಸದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!