Saturday, June 6, 2026
Homeಕರಾವಳಿಪುತ್ತೂರು ಮಹಿಳಾ ಪೊಲೀಸ್‌ ಠಾಣೆಯ ಎಸ್‌ಐ, ಓರ್ವ ಕಾನ್ಸ್‌ಟೇಬಲ್‌ಗೆ ಕೊರೋನಾ ಪಾಸಿಟಿವ್

ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯ ಎಸ್‌ಐ, ಓರ್ವ ಕಾನ್ಸ್‌ಟೇಬಲ್‌ಗೆ ಕೊರೋನಾ ಪಾಸಿಟಿವ್

- Advertisement -
- Advertisement -

ಪುತ್ತೂರು: ನಗರದ ಮಹಿಳಾ ಪೋಲೀಸ್ ಠಾಣೆಯ ಎಸ್‌ಐ ಮತ್ತು ಕಾನ್ಸ್‌ಟೇಬಲ್‌ ಓರ್ವರಿಗೆ ಕೊರೋನಾ ದೃಢಪಟ್ಟಿದೆ.

ಪುತ್ತೂರು ನಗರ ಪೋಲೀಸ್ ಠಾಣೆಯ ಕಾನ್ಸ್‌ಟೇಬಲ್‌ನಲ್ಲಿ ಪಾಸಿಟೀವ್ ಪತ್ತೆಯಾದ ಹಿನ್ನಲೆಯಲ್ಲಿ ಮಹಿಳಾ ಪೋಲೀಸ್ ಠಾಣೆಯ ಎಸ್‌ಐ ಸೇರಿದಂತೆ ಇಬ್ಬರು ಮಹಿಳಾ ಪೋಲೀಸರನ್ನು ಕ್ವಾರೈಂಟೈನ್ ಮಾಡಲಾಗಿತ್ತು. ಆದರೆ, ಇದೀಗ ಬಂದ ವರದಿಯಲ್ಲಿ ಎಸ್‌ಐ ಮತ್ತು ಓರ್ವ ಕಾನ್ಸ್‌ಟೇಬಲ್‌ನಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ಮಹಿಳಾ ಎಸ್‌ಐ ಅವರ 22ವರ್ಷದ ಮಗಳಿಗೂ ಸೋಂಕು ತಗುಲಿರುವುದು ಆಘಾತಕ್ಕೆ ಕಾರಣವಾಗಿದೆ.

ಇಬ್ಬರು ಪೊಲೀಸರೂ ಈ ಹಿಂದೆಯೇ ಕ್ವಾರೈಂಟೈನ್‌ನಲ್ಲಿ ಇದ್ದ ಕಾರಣ ಠಾಣೆಯ ಇತರ ಸಿಬ್ಬಂದಿಗಳ ಸಂಪರ್ಕವಾಗಿರುವ ಸಾಧ್ಯತೆ ಕಡಿಮೆ. ಹೀಗಾಗಿ ಠಾಣೆಯು ಎಂದಿನಂತೆ ಕಾರ್ಯಾಚರಿಸಲಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!