Wednesday, May 15, 2024
Homeತಾಜಾ ಸುದ್ದಿನಟ ದರ್ಶನ್ ಗೆ ಇಂದು ಬೇಸರದ ದಿನ - 20ವರ್ಷಗಳಿಂದ ಜತೆಗಿದ್ದವರನ್ನು ಕಳೆದುಕೊಂಡ ಡಿ ಬಾಸ್

ನಟ ದರ್ಶನ್ ಗೆ ಇಂದು ಬೇಸರದ ದಿನ – 20ವರ್ಷಗಳಿಂದ ಜತೆಗಿದ್ದವರನ್ನು ಕಳೆದುಕೊಂಡ ಡಿ ಬಾಸ್

spot_img
- Advertisement -
- Advertisement -

ಬೆಂಗಳೂರು: ನಟ ದರ್ಶನ್‌ ರ ಪರ್ಮನೆಂಟ್ ಮೇಕಪ್ ಮನ್​ ಆಗಿದ್ದ ಶ್ರೀನಿವಾಸ್ ಇಂದು ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದರ್ಶನ್ ಚಿತ್ರರಂಗಕ್ಕೆ ಬಂದ ದಿನದಿಂದಲೂ ಶ್ರೀನಿವಾಸ್ ದರ್ಶನ್​ರ ಜೊತೆಗಿದ್ದರು. ಇವರು ದರ್ಶನ್​ರ ನೆಚ್ಚಿನ ಮೇಕಪ್​ ಮನ್​ ಎಂದೇ ಗುರುತಿಸಿಕೊಂಡವ್ರು. ಶ್ರೀನಿವಾಸ್ ಲಗ್ಗೆರೆಯ ತಮ್ಮ ಮನೆಯಲ್ಲಿಂದು ನಿಧನರಾಗಿದ್ದಾರೆ.

ಕಳೆದ 2 ದಶಕಗಳಿಂದ ದರ್ಶನ್​ ಅವರ ಬಳಿ ಮೇಕಪ್​ ಮ್ಯಾನ್​ ಆಗಿ ಶ್ರೀನಿವಾಸ್​ ಕೆಲಸ ಮಾಡುತ್ತಾ ಬಂದಿದ್ದಾರೆ. ಇದೀಗ ಅವರು ಸಾವನ್ನಪ್ಪಿದ್ದಾರೆ ಎಂಬ ವಿಚಾರ ಕೇಳಿ ದರ್ಶನ್​ ಟ್ವೀಟ್​ ಮಾಡುವ ಮೂಲಕ ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ನಟ ದರ್ಶನ್,​ ‘ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ದರ್ಶನ್​ರ ಬಹು ನಿರೀಕ್ಷಿತ ಸಿನಿಮಾ ‘ರಾಬರ್ಟ್​’ಗೂ ಇವರೇ ದರ್ಶನ್​ಗೆ ಮೇಕಪ್ ಮಾಡಿದ್ದರು.

- Advertisement -
spot_img

Latest News

error: Content is protected !!