Tuesday, May 14, 2024
Homeಕರಾವಳಿಪುತ್ತೂರು: ವರದಕ್ಷಿಣೆ ಕಿರುಕುಳ ಪ್ರಕರಣ; ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಪುತ್ತೂರು: ವರದಕ್ಷಿಣೆ ಕಿರುಕುಳ ಪ್ರಕರಣ; ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

spot_img
- Advertisement -
- Advertisement -

ಪುತ್ತೂರು: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಕಬಕ ಗ್ರಾಮದ ವಿದ್ಯಾಪುರ ನಿವಾಸಿ ನಸೀಮಾ ಬಾನು ಎಂಬವರು ಆಕೆಯ ಪತಿ ಬಿ.ಕೆ.ಜೈನುಲ್‌ ಆಬಿದ್‌, ಅವರ ತಂದೆ ಅಹಮ್ಮದ್‌, ತಾಯಿ ಸಫಿಯಾ ಹಾಗೂ ಜೈನುಲ್‌ ಆಬಿದ್‌ ಅವರ ತಮ್ಮ ಸರ್ಫುದ್ದೀನ್‌ ಎಂಬವರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದರು.

2010ರ ಜೂ. 27ರಂದು ತನಗೆ ಜೈನುಲ್‌ ಆಬಿದ್‌ ಜತೆ ಮದುವೆಯಾಗಿತ್ತು. ಈ ಸಂದರ್ಭ 1.5 ಲಕ್ಷ ರೂ.ಮತ್ತು 20 ಪವನ್‌ ಚಿನ್ನವನ್ನು ವರದಕ್ಷಿಣೆಯಾಗಿ ಪಡೆದುಕೊಂಡಿದ್ದರು. ಆ ಬಳಿಕವೂ 1 ಲಕ್ಷ ರೂ. ನೀಡುವಂತೆ ಹೇಳಿ ಆರೋಪಿಗಳು ನನಗೆ ಹಿಂಸೆ ನೀಡುತ್ತಿದ್ದುದರಿಂದ ತಾನು ಗಂಡನ ಮನೆ ಬಿಟ್ಟು ತಾಯಿ ಮನೆಗೆ ಬಂದು ನೆಲೆಸಿದ್ದೆ. 2011ರ ಸೆ.7ರಂದು ರಾತ್ರಿ ಪತಿ ಜೈನುಲ್‌ ಆಬಿದ್‌, ಅವರ ತಮ್ಮ ಸರ್ಫುದ್ದೀನ್‌ರವರು ಕಬಕದ ನಮ್ಮ ಮನೆಗೆ ಬಂದು ಹಲ್ಲೆ ಮಾಡಿ ಬೆದರಿಕೆಯೊಡ್ಡಿದ್ದರು ಎಂದು ನಸೀಮಾಬಾನು ಅವರು ಪೊಲೀಸರಿಗೆ ದೂರು ನೀಡಿ, ತನಗೆ ವರದಕ್ಷಿಣೆ ಕಿರುಕುಳ ನೀಡಿದ ಪತಿ,ಅತ್ತೆ,ಮಾವ ಮತ್ತು ಪತಿಯ ತಮ್ಮನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ್ದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಾದ ಜೈನುಲ್‌ ಆಬಿದ್‌, ಆತನ ತಾಯಿ ಸಫಿಯಾ ಮತ್ತು ತಮ್ಮ ಸರ್ಫುìದ್ದೀನ್‌ ಅವರನ್ನು ಖುಲಾಸೆಗೊಳಿಸಿದೆ.

- Advertisement -
spot_img

Latest News

error: Content is protected !!