Saturday, June 6, 2026
Homeಚಿಕ್ಕಮಗಳೂರುಚಿಕ್ಕಮಗಳೂರು :ತಾಲೂಕು ವೈದ್ಯಾಧಿಕಾರಿಗೆ ಸಾರ್ವಜನಿಕರಿಂದ ಬಿತ್ತು ಧರ್ಮದೇಟು

ಚಿಕ್ಕಮಗಳೂರು :ತಾಲೂಕು ವೈದ್ಯಾಧಿಕಾರಿಗೆ ಸಾರ್ವಜನಿಕರಿಂದ ಬಿತ್ತು ಧರ್ಮದೇಟು

- Advertisement -
- Advertisement -

ಚಿಕ್ಕಮಗಳೂರು : ಡಿ ಗ್ರೂಪ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ತಾಲೂಕು ವೈದ್ಯಾಧಿಕಾರಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದ

ಎನ್.ಆರ್.ಪುರ ಟಿ.ಹೆಚ್.ಓ. ಡಾ.ಎಲ್ಡೋಸ್ ವಿರುದ್ಧ ಗಂಭೀರ ಆರೋಪ ಮಾಡಿ ಸ್ಥಳೀಯರು ಧರ್ಮದೇಟು ಕೊಟ್ಟಿದ್ದಾರೆ. ಮಹಿಳೆಯ ಸಂಬಂಧಿಕರು ವೈದ್ಯರಿಗೆ ಹಿಗ್ಗಾಮುಗ್ಗಾ ಗೂಸ ಕೊಟ್ಟಿದ್ದಾರೆ.ಬಾಳೆಹೊನ್ನೂರು ಸರ್ಕಾರಿ ಅಸ್ಪತ್ರೆ ವಸತಿ ಗೃಹದಲ್ಲಿ ಘಟನೆ ನಡೆದಿದೆ.

ಈ ಹಿಂದೆ ನರ್ಸ್ ಕೆನ್ನೆಗೆ ಹೊಡೆದು ವೈದ್ಯ ಎಲ್ಡೋಸ್ ಅಮಾನತ್ತಾಗಿದ್ದರು. ಈ ಹಿಂದೆ ವೈದ್ಯರ ಮೇಲೆ ಹಲವು ಆರೋಪಗಳು ಕೇಳಿ ಬಂದಿತ್ತು. ಸದ್ಯ ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!