Sunday, June 7, 2026
Homeಕರಾವಳಿಮಂಗಳೂರು: ಕೊರಗಜ್ಜನ ಕಟ್ಟೆ ಅಪವಿತ್ರ ಮಾಡಿರುವುದನ್ನು ಕ್ರೈಸ್ತ ಒಕ್ಕೂಟ ಖಂಡಿಸುತ್ತದೆ - ಪ್ರಶಾಂತ್ ಜತ್ತನ್ನ

ಮಂಗಳೂರು: ಕೊರಗಜ್ಜನ ಕಟ್ಟೆ ಅಪವಿತ್ರ ಮಾಡಿರುವುದನ್ನು ಕ್ರೈಸ್ತ ಒಕ್ಕೂಟ ಖಂಡಿಸುತ್ತದೆ – ಪ್ರಶಾಂತ್ ಜತ್ತನ್ನ

- Advertisement -
- Advertisement -

ಮಂಗಳೂರು: ಕೊರಗಜ್ಜನ ಕಟ್ಟೆ ಅಪವಿತ್ರ ಪ್ರಕರಣದಲ್ಲಿ ಬಂಧಿತರಾಗಿರುವ ದೇವದಾಸ ದೇಸಾಯಿ ಇವರ ಕೃತ್ಯವನ್ನು ನಾವು ಭಾರತೀಯ ಕ್ರೈಸ್ತ ಒಕ್ಕೂಟ ಖಂಡಿಸುತ್ತೇವೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, “ಕೊರಗಜ್ಜನ ಕಾಣಿಕೆ ಡಬ್ಬಿಗೆ ಕಾಂಡೋಮ್ ಹಾಕಿರುವುದು ಕೋಮು ಸಾಮರಸ್ಯವನ್ನು ಕೆಡಿಸಲು ಮಾಡಿದ ಕೃತ್ಯ. ಕಾನೂನು ರೀತಿಯಲ್ಲಿ ತಕ್ಕ ಶಿಕ್ಷೆಯನ್ನು ಕೊಡಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದರು.

ಇನ್ನು ಕ್ರೈಸ್ತ ಧರ್ಮ ಯಾವತ್ತೂ ಕೂಡ ಇನ್ನೊಂದು ಧರ್ಮವನ್ನು ಅಥವಾ ಬೇರೆಯವರ ನಂಬಿಕೆಯನ್ನು ಪ್ರಶ್ನೆ ಮತ್ತು ದ್ವೇಷ ಮಾಡಲ್ಲ ಅವರು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!