Sunday, June 7, 2026
Homeಕರಾವಳಿಉಡುಪಿಕುಂದಾಪುರ: ಯುವತಿಗೆ ಚೂರಿ ಇರಿದು ಭಗ್ನಪ್ರೇಮಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ !

ಕುಂದಾಪುರ: ಯುವತಿಗೆ ಚೂರಿ ಇರಿದು ಭಗ್ನಪ್ರೇಮಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ !

- Advertisement -
- Advertisement -

ಕುಂದಾಪುರ : ಯುವತಿಗೆ ಚೂರಿ ಇರಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆಯಲ್ಲಿ ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಸಂಜೆ ಶಿರಿಯಾರ ರಾಮಮಂದಿರ ಬಳಿ ಯುವತಿಗೆ ಚೂರಿ ಇರಿದು ಬಳಿಕ ತಾನೂ ಹೆಸ್ಕೂತೂರಿನ ಹಾರ್ಯಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆರೋಪಿ ರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್ ( 35 ). ಶಿರಿಯರಾದ ಆಭರಣ ಮಳಿಗೆಯಲ್ಲಿ ಯುವತಿ ಕೆಲಸ ಮಾಡಿಕೊಂಡಿದ್ದು, ಕಳೆದ ಕೆಲವು ಸಮಯಗಳಿಂದ ಪ್ರೀತಿಸುವಂತೆ ಒತ್ತಡ ಹೇರುತ್ತಿದ್ದ ಯುವಕ , ಇಂದು ಮಧ್ಯಾಹ್ನ ಯುವತಿ ಕೆಲಸ ನಿರ್ವಹಿಸುತ್ತಿದ್ದ ಸ್ಥಳದಿಂದ ಊಟಕ್ಕೆಂದು ಹೋದ ಸಂದರ್ಭ ಹಿಂಬಾಲಿಸಿಕೊಂಡು ಬಂದಿದ್ದು ಯುವತಿಗೆ ಚೂರಿ ಇರಿದಿದ್ದಾನೆ.

ಯುವತಿಯ ಕೈಯಲ್ಲಿನ ರಕ್ತಸ್ರಾವ ನೋಡಿ ವಿಚಲಿತಗೊಂಡ ಭಗ್ನ ಪ್ರೇಮಿ ಕಟ್ಟಡದಿಂದ ಹಾರಿ ನೇರ ತನ್ನ ಮನೆಯಾದ ಹೆಸ್ಕೂತೂರಿಗೆ ಹೋಗಿ ಬಳ್ಳಿಯನ್ನ ಹಿಡಿದು ಹಾರ್ಯಾಡಿ ಹೊಳೆಗೆ ಹಾರಿ ಇನ್ನೊಂದು ದಡದ ಹಾಡಿಯಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹಿಂದೆ ಯುವತಿ ರಿಕ್ಷಾ ಚಾಲಕನ ಕಿರುಕುಳ ತಾಳಲಾರದೆ ಕೋಟ ಠಾಣೆಯಲ್ಲಿ ದೂರು ನೀಡಿದ್ದಳು . ಬಳಿಕ ಪೊಲೀಸರು ಯುವಕ ರಾಘವೇಂದ್ರನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು .

- Advertisement -

Latest News

error: Content is protected !!