Saturday, June 6, 2026
Homeತಾಜಾ ಸುದ್ದಿನಿತ್ಯಾನಂದ ಸ್ವಾಮಿ ನನಗಿಷ್ಟ: ಮದುವೆ ಆದರೆ ಅವರನ್ನೇ ಆಗ್ತೀನಿ ಎಂದ ಜೇಮ್ಸ್ ಸಿನಿಮಾದ ನಾಯಕಿ

ನಿತ್ಯಾನಂದ ಸ್ವಾಮಿ ನನಗಿಷ್ಟ: ಮದುವೆ ಆದರೆ ಅವರನ್ನೇ ಆಗ್ತೀನಿ ಎಂದ ಜೇಮ್ಸ್ ಸಿನಿಮಾದ ನಾಯಕಿ

- Advertisement -
- Advertisement -

ಬೆಂಗಳೂರು: ನಿತ್ಯಾನಂದ ಸ್ವಾಮೀಜಿ ಅಂದರೆ ನನಗೆ ತುಂಬಾ ಇಷ್ಟ. ಅವರಲ್ಲಿ ಏನೋ ಒಂದು ವಿಶೇಷತೆ ಇದೆ. ಆದ್ದರಿಂದ ಅವರನ್ನು ಎಲ್ಲರೂ ಇಷ್ಟಪಡುತ್ತಾರೆ. ನಾನು ಮದುವೆ ಅಂತ ಆದರೆ ನಿತ್ಯಾನಂದ ಸ್ವಾಮಿಯನ್ನೇ ಆಗಬೇಕು ಅನ್ನೋ ಆಸೆ ಇದೆ ಎಂದು ಪ್ರಿಯಾ ಆನಂದ್‌ ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ನಿತ್ಯಾನಂದನ ವಿರುದ್ಧ ಲೈಂಗಿಕ ಕಿರುಕುಳದ ಕೇಸ್‌ಗಳಿವೆ. ಈ ಕಾರಣಕ್ಕೇ ಆತ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಕೈಲಾಸ ಎಂಬ ದೇಶ ಕಟ್ಟಿರೋದಾಗಿ ಹೇಳುತ್ತಿದ್ದಾನೆ. ಇನ್ನು ಆತ ಸಮಾಧಿ ಸ್ಥಿತಿಗೆ ತಲುಪಿದ್ದಾನೆ, ಆತ ಸತ್ತೇ ಹೋಗಿದ್ದಾನೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇನ್ನೊಂದೆಡೆ ನಿತ್ಯಾನಂದನ ಜೊತೆ ಕೈಲಾಸಕ್ಕೆ ಹೋಗಿದ್ದ ಹಲವು ಯುವತಿಯರು ಆತನಿಂದ ಕಿರುಕುಳಕ್ಕೆ ಒಳಗಾಗಿ ತಪ್ಪಿಸಿಕೊಂಡು ಬಂದಿದ್ದಾರೆ. ನಿತ್ಯಾನಂದನ ವಿರುಧ್ಧ ಹಲಾವರು ಮಂದಿ ಆರೋಪಗಳು ಮಾಡುತ್ತಿರುವ ಸಂದರ್ಭದಲ್ಲಿ ಬಹುಭಾಷಾ ಚಲುವೆ ಪ್ರಿಯಾ ಆನಂದ್‌ ಈ ರೀತಿಯ ಹೇಳಿಕೆ ನೀಡಿರುವುದು ಅಚ್ಚರಿ ತರಿಸಿದೆ.

ಪ್ರಿಯಾ ಆನಂದ್‌ ಈ ಮಾತನ್ನು ತಮಾಷೆಯಾಗಿ ಹೇಳಿದ್ದಾರೋ ಅಥವಾ ನಿಜವಾಗಿಯೂ ಹೇಳಿದ್ದಾರೋ ಗೊತ್ತಿಲ್ಲ. ಆದ್ರೆ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗುತ್ತಿರುವುದಂತೂ ನಿಜ.

- Advertisement -

Latest News

error: Content is protected !!