Saturday, April 27, 2024
Homeತಾಜಾ ಸುದ್ದಿರಾಮಲಲ್ಲಾನ ಎದುರು ಕ್ಷಮೆ ಕೇಳಿದ ಪ್ರಧಾನಿ ಮೋದಿ!

ರಾಮಲಲ್ಲಾನ ಎದುರು ಕ್ಷಮೆ ಕೇಳಿದ ಪ್ರಧಾನಿ ಮೋದಿ!

spot_img
- Advertisement -
- Advertisement -

ರಾಮ ಭಕ್ತರ 500 ವರ್ಷಗಳ ಕಾಯುವಿಕೆ ಕೊನೆಗೂ ಕೊನೆಗೊಂಡಿದ್ದು, ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪೂರ್ಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜೆಯನ್ನು ನೆರವೇರಿಸಿದ ಬಳಿಕ ಭಾವುಕರಾಗಿ, ರಾಮಲಲ್ಲಾ ವಿಗ್ರಹಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿ ನಮನ ಸಲ್ಲಿಸಿದರು.

ಇನ್ನು ಶ್ರೀರಾಮನ ಎದುರು ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಿದ್ದಾರೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ ರಾಮ ಜನ್ಮಭೂಮಿ ದೇಗುಲದ ಆವರಣದಲ್ಲಿ ಗಣ್ಯರು ಮತ್ತು ವಿವಿಐಪಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ನಾನು ಭಗವಾನ್ ಶ್ರೀರಾಮನಲ್ಲಿ ಕ್ಷಮೆಯಾಚಿಸುತ್ತೇನೆ. ನಮ್ಮ ಪ್ರಯತ್ನ, ತ್ಯಾಗ, ತಪಸ್ಸುಗಳ ಹೊರತಾಗಿಯೂ ಈ ಕೆಲಸವನ್ನು ಇಷ್ಟು ಶತಮಾನಗಳಿಂದ ಮಾಡಲಾಗಲಿಲ್ಲ ಅಂತ ಕ್ಷಮೆ ಯಾಚಿಸಿದರು.

- Advertisement -
spot_img

Latest News

error: Content is protected !!