Monday, April 29, 2024
Homeಕರಾವಳಿವಗ್ಗ ಮನೆಯವರಿಗೆ ಬೆದರಿಸಿ ದರೋಡೆಗೈದ ಪ್ರಕರಣ; ಏಳು ಜನ ಆರೋಪಿಗಳನ್ನು ಬಂಧಿಸಿದ ಪೊಲೀಸರು

ವಗ್ಗ ಮನೆಯವರಿಗೆ ಬೆದರಿಸಿ ದರೋಡೆಗೈದ ಪ್ರಕರಣ; ಏಳು ಜನ ಆರೋಪಿಗಳನ್ನು ಬಂಧಿಸಿದ ಪೊಲೀಸರು

spot_img
- Advertisement -
- Advertisement -

ಬಂಟ್ವಾಳ: ದರೋಡೆಕೋರರ ತಂಡವೊಂದು ಮಾರಾಕಾಸ್ತ್ರಗಳೊಂದಿಗೆ ನುಗ್ಗಿ ಮನೆಯವರನ್ನು ಬೆದರಿಸಿ ಸುಮಾರು ರೂ.3,15,000 ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದ ಘಟನೆ ದ.ಕ.ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ರ ಸಮೀಪದ ಮೇನಾಡು ಎಂಬಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳದ ಮರಿಟಾ ಸಿಂಥಿಯಾ ಪಿಂಟೋ ಎಂಬವರ ವಾಸದ ಮನೆಗೆ ದಿನಾಂಕ 11-01-2024 ರಂದು ಮುಂಜಾನೆ 6-15 ಗಂಟೆಗೆ ದರೋಡೆಕೋರರ ತಂಡವೊಂದು ಮಾರಾಕಾಸ್ತ್ರಗಳೊಂದಿಗೆ ನುಗ್ಗಿ ಮನೆಯವರನ್ನು ಬೆದರಿಸಿ ಸುಮಾರು ರೂ.3,15,000 ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:03/2024 ಕಲಂ: 395, 397, 411 ಭಾ.ದಂ.ಸಂ. ರಂತೆ ಪುಕರಣ ದಾಖಲಾಗಿತ್ತು.

ಯಾವುದೇ ಸಣ್ಣ ಸುಳಿವುಗಳೇ ಇಲ್ಲದ ಈ ದರೋಡೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಗೆ ಒಂದು ಸವಾಲು ಆಗಿತ್ತು. ಪ್ರಕರಣದ ಗಂಭೀರತೆಯನ್ನು ಮನಗಂಡು ಶ್ರೀ ರಿಷ್ಯಂತ್, ಐಪಿಎಸ್. ಪೊಲೀಸ್ ಅಧೀಕ್ಷಕರು, ದ.ಕ.ಜಿಲ್ಲೆ ರವರು ಶ್ರೀ ಧರ್ಮಪ್ಪ, ಮತ್ತು ಶ್ರೀ ರಾಜೇಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳ ಸಹಭಾಗಿತ್ವದಲ್ಲಿ, ಶ್ರೀ. ಎಸ್. ವಿಜಯ ಪ್ರಸಾದ್, ಡಿ.ವೈ.ಎಸ್.ಪಿ. ಬಂಟ್ವಾಳ ರವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರಾದ ಶ್ರೀ ಶಿವಕುಮಾರ ಬಿ, ಶ್ರೀ ನಂದಕುಮಾರ್, ಪಿ.ಎಸ್.ಐ. ಪುಂಜಾಲಕಟ್ಟೆ, ಶ್ರೀ ಹರೀಶ ಎಂ.ಆರ್. ಪಿ.ಎಸ್. ಐ. ಬಂಟ್ವಾಳ ಗ್ರಾಮಾಂತರ ಠಾಣೆರವರ 3 ವಿಶೇಷ ಪತ್ತೆ ತಂಡಗಳನ್ನು ರಚಿಸಿ ಸದ್ರಿ ತಂಡಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ, ನುರಿತ ಅಪರಾಧ ವಿಭಾಗದ ಸಿಬ್ಬಂದಿಗಳಾದ ಎ.ಎಸ್.ಐ. ಗಿರೀಶ್, ಹೆಚ್.ಸಿ. ಗಳಾದ ಸುಜು, ರಾಧಾಕೃಷ್ಣ, ಉದಯ ರೈ, ಅದ್ರಾಮ, ಪ್ರವೀಣ್ ರೈ, ಪ್ರವೀಣ್, ಸಂದೀಪ್, ರಾಹುಲ್, ಇರ್ಷಾದ್, ರಾಜೇಶ್, ಹರಿಶ್ಚಂದ್ರ, ಪಿ.ಸಿ.ಗಳಾದ ಪುನೀತ್, ರಮ್ಯಾನ್, ಯೋಗೇಶ್ ಡಿ.ಎಲ್, ಕುಮಾರ್ ಹೆಚ್. ಕೆ., ವಿನಾಯಕ ಬಾರ್ಕಿ, ಜಗದೀಶ ಅತ್ತಾಜೆ, ಜಮೀರ್ ಕಲಾರಿ, ಎ.ಹೆಚ್.ಸಿ.ಗಳಾದ ಕುಮಾರ್, ಮಹಾಂತೇಶ್, ಜಿಲ್ಲಾ ಪೊಲೀಸ್ ಕಚೇರಿಯ ಗಣಕಯಂತ್ರ ವಿಭಾಗದ ದಿವಾಕರ್, ಸಂಪತ್ ರವರನ್ನು ನೇಮಕ ಮಾಡಿದ್ದರು.

ಇಲಾಖಾ ಮೇಲಾಧಿಕಾರಿಗಳ ಅತ್ಯಂತ ಅನುಭವಿ ಹಾಗು ಸಮಯೋಚಿತ ಮಾರ್ಗದರ್ಶನ, ಸಲಹೆ ಸೂಚನೆ ಮತ್ತು ನಿರಂತರ ನಿಗಾವಣೆಯಲ್ಲಿ ಸದ್ರಿ ವಿಶೇಷ ಪತ್ತೆ ತಂಡವು ತನ್ನ ನಿರಂತರ ಹಾಗು ಶ್ರಮಭರಿತ ಪ್ರಯತ್ನದಿಂದ ಸದ್ರಿ ದರೋಡೆ ಪ್ರಕರಣವನ್ನು ಭೇಧಿಸಿ ದರೋಡೆಕೋರರನ್ನು ಬಂಧಿಸಿ ದರೋಡೆಗೊಳಗಾದ ರೂ.3,15,000 ಮೌಲ್ಯದ ಚಿನ್ನಾಭರಣ ಹಾಗು ದರೋಡೆಗೆ ಬಳಸಿದ ಒಂದು ಇನ್ನೋವಾ ಕಾರು ಅಂದಾಜು ಮೌಲ್ಯ ರೂ.8 ಲಕ್ಷ ಹಾಗು ಟಾಟಾ ಇಂಡಿಕಾ ಕಾರು ಅಂದಾಜು ಮೌಲ್ಯ ರೂ.2 ಲಕ್ಷ ಇವುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿ ಆಗಿರುತ್ತಾರೆ.

ದರೋಡೆಕೋರರನ್ನು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಸುರೇಶ ನಾಯ್ಕ ಅವರ ಮಗ ಗಣೇಶ ನಾಯ್ಕ (26) ದಿನೇಶ್ ನಾಯ್ಕ (22), ಮಂಗಳೂರು ತಾಲೂಕು, ಐಕಳ ಗ್ರಾಮದ ಜಯರಾಜ್ ಶೆಟ್ಟಿ ಅವರ ಮಗ ಸಾಗರ ಶೆಟ್ಟಿ (21), ಕಡಬ ತಾಲೂಕು, ಬೆಳಂದೂ ಗ್ರಾಮದ, ವಿನ್ಸಿ ಲ್ಯಾನ್ಸಿ ಪಿಂಟೋ ಅವರ ಮಗ ರಾಕೇಶ್ ಎಲ್. ಪಿಂಟೋ (29), ವಾಸು ಸಾಲ್ಯಾನ್ ಅವರ ಮಗ ಪ್ರವೀಣ್ (36), ಅಣ್ಣಿ ಪೂಜಾರಿ ಅವರ ಮಗ ಸುಧೀರ್ (29) ಎಂದು ಗುರುತಿಸಲಾಗಿದೆ.

ಇನ್ನು ದರೋಡೆಗೈದ ಚಿನ್ನಾಭರಣವನ್ನು ಸ್ವೀಕರಿಸಿದಾತ ಮೂಲತ: ಬಂಟ್ವಾಳ ತಾಲೂಕಿನ, ಇರಾ ಗ್ರಾಮದವನಾದ ಪ್ರಸ್ತುತ ಗೌರಿ ಕಾಲುವೆ, ಚಿಕ್ಕಮಗಳೂರು ಜಿಲ್ಲೆ ವಾಸಿ ಮಹಮ್ಮದ್‌ ಹನೀಫ್ (49). ಸದ್ರಿ ಆರೋಪಿಗಳ ಪೈಕಿ ಗಣೇಶ ನಾಯ್ಕ ಈತನು 2023ನೇ ಸಾಲಿನಲ್ಲಿ ಮಂಗಳೂರು ನಗರ ವ್ಯಾಪ್ತಿಯ ಮುಲ್ಕಿ, ಐಕಳ ಹರೀಶ್ ಶೆಟ್ಟಿರವರ ಮನೆಯಿಂದ ಅಪಾರ ಮೊತ್ತದ ನಗದು, ಚಿನ್ನಾಭರಣ, ವಜ್ರ ಕಳವು ಮಾಡಿದ ಮುಖ್ಯ ಆರೋಪಿಯಾಗಿದ್ದು, ಉಳಿದಂತೆ ಸೀತಾರಾಮ, ಪ್ರವೀಣ್, ಸುಧೀರ್ ಹಾಗು ಮಹಮ್ಮದ್ ಹನೀಫ್ ರವರ ವಿರುದ್ಧ ದ.ಕ.ಜಿಲ್ಲೆ ಹಾಗು ಇನ್ನಿತರ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಈ ಪತ್ತೆ ಕಾರ್ಯಕ್ಕೆ ಇಲಾಖಾ ಮೇಲಾಧಿಕಾರಿಗಳು ಮೆಚ್ಚುಗೆಯನ್ನು ಸೂಚಿಸಿ ಬಹುಮಾನವನ್ನು ಘೋಷಿಸಿರುತ್ತಾರೆ ಹಾಗು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿರುತ್ತದೆ.

- Advertisement -
spot_img

Latest News

error: Content is protected !!