Wednesday, October 14, 2026
Homeಕರಾವಳಿರಾಮಮಂದಿರದ ನಿರ್ವಿಘ್ನ ಉದ್ಘಾಟನೆಗೆ ಸಂಕಲ್ಪ ಮಾಡಿದ್ಧ ಶಾಸಕ ವೇದವ್ಯಾಸ ಕಾಮತ್ ಉರುಳು ಸೇವೆ

ರಾಮಮಂದಿರದ ನಿರ್ವಿಘ್ನ ಉದ್ಘಾಟನೆಗೆ ಸಂಕಲ್ಪ ಮಾಡಿದ್ಧ ಶಾಸಕ ವೇದವ್ಯಾಸ ಕಾಮತ್ ಉರುಳು ಸೇವೆ

- Advertisement -
- Advertisement -

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಿರ್ವಿಘ್ನವಾಗಿ ನಡೆಯುವಂತಾಗಲಿ ಎಂದು ಸಂಕಲ್ಪ ಮಾಡಿದ್ದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಉರುಳು ಸೇವೆ ಮಾಡುವ ಮೂಲಕ ಸಂಕಲ್ಪ ತೀರಿಸಿದ್ದಾರೆ.

ಮಂಗಳೂರಿನ ಬಜಿಲಕೇರಿಯಲ್ಲಿರುವ ಮುಖ್ಯಪ್ರಾಣ ದೇವಸ್ಥಾನದಲ್ಲಿ ವೇದವ್ಯಾಸ ಕಾಮತ್ ಉರುಳು ಸೇವೆ ಮಾಡಿದ್ದಾರೆ.

ರಾಮಮಂದಿರದ ನಿರ್ವಿಘ್ನ ಉದ್ಘಾಟನೆಗಾಗಿ ದೇವಸ್ಥಾನದಲ್ಲಿ ವೇದವ್ಯಾಸ ಕಾಮತ್ ವಿಶೇಷ ಸಂಕಲ್ಪ ಮಾಡಿದ್ದರು.

ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಉರುಳು ಸೇವೆ ಮಾಡುವ ಮೂಲಕ ಶಾಸಕರು ಸಂಕಲ್ಪ ತೀರಿಸಿದ್ದಾರೆ.

ಉರುಳು ಸೇವೆ ನಡೆಸಿದ ಬಳಿಕ ವೇದವ್ಯಾಸ ಕಾಮತ್ ಮುಖ್ಯಪ್ರಾಣ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

- Advertisement -

Latest News

error: Content is protected !!