Thursday, June 4, 2026
Homeತಾಜಾ ಸುದ್ದಿರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಹಲವು ಗಣ್ಯರು ಭಾಗಿ; ಅಯೋಧ್ಯೆಯಲ್ಲಿ ಕನ್ನಡಿಗರು; ಯಾರೆಲ್ಲಾ ಭಾಗಿಯಾಗಿದ್ರು?

ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಹಲವು ಗಣ್ಯರು ಭಾಗಿ; ಅಯೋಧ್ಯೆಯಲ್ಲಿ ಕನ್ನಡಿಗರು; ಯಾರೆಲ್ಲಾ ಭಾಗಿಯಾಗಿದ್ರು?

- Advertisement -
- Advertisement -

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿಗಳಾದ ಹೆಚ್​ಡಿ ದೇವೇಗೌಡ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಕುಮಾರ್ ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆಯಲ್ಲಿ ಭಾಗಿಯಾದರು.

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರು ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು. ನಂತರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗೊಳ್ಳುವ ಮೂಲಕ ಶತಮಾನದ ಕನಸು ಸಾಕಾರಗೊಂಡಿದೆ ಎಂದು,” ತಿಳಿಸಿದರು.

ಚಕ್ರವರ್ತಿ ಸೂಲಿಬೆಲೆ, “ಒಂದು ಮಂದಿರಕ್ಕಾಗಿ ಇಷ್ಟು ಭಾವುಕತೆಯಾ? ನನ್ನ ನಾನೇ ಕೇಳಿಕೊಂಡರೆ ಅಚ್ಚರಿ ಎನಿಸುತ್ತದೆ. ಇಲ್ಲ. ಇದು ಬರಿಯ ಕಟ್ಟಡದ ಮುಂದೆ ಕುಳಿತಾಗ ಸುರಿಯುತ್ತಿರುವ ಕಣ್ಣೀರಲ್ಲ, ಶತಶತಮಾನಗಳ ಕಳಂಕ ತೊಳೆದುಹೋದ ಆನಂದ. ಪ್ರಜ್ವಲಿಸುವ ಆತ್ಮಾಭಿಮಾನದ ಗುರುತು ಮತ್ತು ಭವಿಷ್ಯದ ಆಶಾಕಿರಣದ ಮುನ್ಸೂಚನೆ,” ಎಂದು ಹೇಳಿದ್ದಾರೆ.

ಬಿಜೆಪಿ ನಾಯಕ ಪ್ರಭಾಕರ್ ಕೋರೆ, ಆರ್​ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಯದುವೀರ್ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್ ಸಹ ಭಾಗಿಯಾಗಿದ್ದರು.ಇನ್ನು ಕೃಷ್ಣಮಠದ ಪೇಜಾವರ ಶ್ರೀಗಳ ಸಮ್ಮುಖದಲ್ಲಿಯೇ ರಾಮಲಲ್ಲಾ ಪ್ರಾಣಪ್ರತಿಷ್ಠೆಯ ಪೂಜಾ ಕೈಂಕರ್ಯಗಳು ನಡೆದವು.

- Advertisement -

Latest News

error: Content is protected !!