Friday, May 10, 2024
Homeತಾಜಾ ಸುದ್ದಿದಾವಣಗೆರೆಯ ಮಾಸ್ಕ್ ಗೆ ಬಂತು ಪ್ರಧಾನಿಗಳಿಂದ ಮೆಚ್ಚುಗೆಯ ಪತ್ರ

ದಾವಣಗೆರೆಯ ಮಾಸ್ಕ್ ಗೆ ಬಂತು ಪ್ರಧಾನಿಗಳಿಂದ ಮೆಚ್ಚುಗೆಯ ಪತ್ರ

spot_img
- Advertisement -
- Advertisement -

ದಾವಣಗೆರೆ: ಕೊರೊನಾದಿಂದಾಗಿ ಮಾಸ್ಕ್ ಇಲ್ಲದೇ ಜನ ಹೊರಗಡೆ  ಹೋಗೋ ಹಾಗೇ ಇಲ್ಲ. ಹಾಗಾಗಿ ಈಗ ಮಾಸ್ಕ್ ಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಅದರಲ್ಲೂ ಕಾಟನ್ ಮಾಸ್ಕ್ ಗಳಿಗಂತೂ ತುಂಬಾನೇ ಬೇಡಿಕೆ. ದಾವಣಗೆರೆಯ ಕುಟುಂಬವೊಂದು ಇದೇ ಬೇಡಿಕೆಯನ್ನೇ ಆಧರಿಸಿ ಮಾಸ್ಕ್ ತಯಾರಿಸಿ ಮಾರಾಟ ಮಾಡುತ್ತಿದೆ. ಅಲ್ದೇ ಅವರು ತಯಾರಿಸಿದ ಮಾಸ್ಕ್ ಗಳನ್ನು ಪ್ರಧಾನಿಗಳಿಗೂ ಕಳುಹಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಹೌದು.. ದಾವಣಗೆರೆಯ ಎಂಸಿಸಿ ಬಿ-ಬ್ಲಾಕ್‍ನ ಕುವೆಂಪು ನಗರದ ಸಾಮಾಜಿಕ ಕಾರ್ಯಕರ್ತ ಕೆ.ಪಿ ವಿವೇಕಾನಂದ ಅವರ ಮನೆಗೆ ಸ್ವತಃ ಪ್ರಧಾನಿ ಕಚೇರಿಯಿಂದ ಈ ಪ್ರಶಂಸನೀಯ ಪತ್ರ ಬಂದಿದೆ. ಪ್ರಧಾನಿಯವರು ಆತ್ಮನಿರ್ಭರ್ ಎಂಬ ಪರಿಕಲ್ಪನೆಯಂತೆ,  ಕೆ.ಪಿ. ವಿವೇಕಾನಂದ ಪಕ್ಕ ಕಾಟನ್ ಬಟ್ಟೆಯಿಂದ ಮಾಸ್ಕ್ ತಯಾರಿಸುವ ಚಿಂತನೆ ನಡೆಸುವ ಜೊತೆ ಕಾರ್ಯಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅದರಂತೆ ಕಾಟನ್ ಮಾಸ್ಕ್ ಗಳನ್ನು ತಯಾರಿಸುತ್ತಿದ್ದಾರೆ.

ಇದೇ ಮಾಸ್ಕ್ ಗಳನ್ನು ಕವಿತಾದೇವಿ ಹಾಗೂ ವಿವೇಕಾನಂದ ಅವರ ಮಗಳು ಕಾವ್ಯಾ ಎಂಬವರು ಇಂಡಿಯನ್ ಪೋಸ್ಟ್ ನ ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನಿ ಕಚೇರಿಗೆ ಕಳುಹಿಸಿದ್ದರು. ಕೇಸರಿ, ಬಿಳಿ, ಹಸಿರು ಮೂರು ಬಣ್ಣದ ಪ್ರತ್ಯೇಕ ಮೂರು ಮಾಸ್ಕ್ ಗಳನ್ನು ಕಳುಹಿಸಿದ್ದರು. ಕೆಲವು ದಿನಗಳ ಕಾಲ ಯಾವುದೇ ಉತ್ತರ ಬರಲಿಲ್ಲ.

ಹಲವು ದಿನಗಳ ಬಳಿಕ ಪ್ರಧಾನಿಯವರ ಒಂದು ವಿಶೇಷ ಫೋಟೋ ಸ್ನೇಹಿತರು ಕಳುಹಿಸಿದ್ದರು. ಅದರಲ್ಲಿ ದಾವಣಗೆರೆಯಿಂದ ಕಳುಹಿಸಿದ್ದ ಮಾಸ್ಕ್ ಅನ್ನು ಮೋದಿ ಅವರು ಧರಿಸಿದ್ದ ಭಾವಚಿತ್ರ ಕಂಡು ವಿವೇಕಾನಂದ ಹಾಗೂ ಅವರ ಸ್ನೇಹಿತರು ಫುಲ್ ಖುಷ್ ಆದ್ರು. ಅಲ್ಲದೆ ಕೆಲ ದಿನಗಳ ನಂತರ ಪ್ರಧಾನಿ ಕಚೇರಿಯಿಂದ ಇವರ ಕುಟುಂಬಕ್ಕೆ ಪ್ರಶಂಸನೀಯ ಪತ್ರವನ್ನು ಕಳುಹಿಸಿದ್ದು, ಇದನ್ನು ನೋಡಿದ ವಿವೇಕಾನಂದರವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!