Thursday, June 4, 2026
Homeತಾಜಾ ಸುದ್ದಿಬಂಧನಕ್ಕೊಳಗಾದ ಖ್ಯಾತ ಹಾಸ್ಯ ನಟ ವಿಜಯ್ ರಾಝಿ!…

ಬಂಧನಕ್ಕೊಳಗಾದ ಖ್ಯಾತ ಹಾಸ್ಯ ನಟ ವಿಜಯ್ ರಾಝಿ!…

- Advertisement -
- Advertisement -

ಮುಂಬೈ: ಬಾಲಿವುಡ್ ನ ಖ್ಯಾತ ಹಾಸ್ಯ ನಟ ವಿಜಯ್ ರಾಝಿ ರನ್ನು ಚಿತ್ರೀಕರಣದ ವೇಳೆ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ನಟ ವಿಜಯ್ ರಾಝಿ ಅವರು ನವೆಂಬರ್ 2 ರಂದು ಚಿತ್ರದ ಚಿತ್ರೀಕರಣದ ವೇಳೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.ಈ ಕುರಿತು ಚಿತ್ರತಂಡದ ಸದಸ್ಯೆಯೊಬ್ಬರು ಗೋಂಡಿಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಗೋಂಡಿಯಾ ಪೊಲೀಸರು ನಟ ವಿಜಯ್ ರಾಝ್ ರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ರಿಪಬ್ಲಿಕ್ ಟಿವಿ ಸಂಪಾದಕನ ಬಂಧನ!.. ಅರ್ನಬ್ ಗೋಸ್ವಾಮಿಯನ್ನು ಎಳೆದೊಯ್ದ ಪೊಲೀಸರು

ಮುಂಬೈ: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ ಸರ್ಕಾರ ಮತ್ತು ರಿಪಬ್ಲಿಕ್ ಟಿವಿ ಮಧ್ಯೆ ತಿಕ್ಕಾಟ ನಡೆಯುತ್ತಿತ್ತು ಆದರೆ ಇಂದು ಮುಂಜಾನೆ ರಿಪಬ್ಲಿಕ್ ಸಂಪಾದಕ ಅರ್ನಬ್ ಗೋಸ್ವಾಮಿ ಮನೆಗೆ ನುಗ್ಗಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ.ಅರ್ನಬ್ ಮನೆಗೆ ತೆರಳಿದ್ದ ಪೊಲೀಸರು ಅವರನ್ನು ಬಂಧಿಸಿದಾಗ ನಿರಾಕರಿಸಿದ ಕಾರಣ ಅಕ್ಷರಶಃ ಎಳೆದೊಯ್ಯಲಾಗಿದೆ.

ಬಂಧನದ ವೇಳೆ ಪೊಲೀಸರು ತಮ್ಮ ಹಾಗೂ ಮಗನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅರ್ನಬ್ ಹೇಳಿದ್ದಾರೆ.ಪೊಲೀಸ್ ವ್ಯಾನ್‌ಗೆ ಬಲವಂತವಾಗಿ ತಳ್ಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದೆ.

bandhnavaaಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ. ಮಹಾರಾಷ್ಟ್ರ ಸರ್ಕಾರ ಉದ್ದೇಶಪೂರ್ವಕವಾಗಿ ಈ ದಾಳಿ ಮಾಡಿದೆ ಎಂದು ರಿಪಬ್ಲಿಕ್ ಟಿವಿ ಆರೋಪಿಸಿದೆ.
2018ರ ಆತ್ಮಹತ್ಯೆಗೆ ಕುಮ್ಮಕ್ಕು ಆರೋಪ ಪ್ರಕರಣವೊಂದನ್ನು ಪುನಃ ತೆರೆದಿರುವ ಪೊಲೀಸರು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಮುಂಬೈ ಪೊಲೀಸ್, ಬಾಲಿವುಡ್ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅರ್ನಬ್ ನಿರಂತರ ವರದಿಗಳನ್ನು ಬಿತ್ತರಿಸಿದ್ದರು. ಈ ಸಂಬಂಧ ಅರ್ನಬ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದವು. ಜತೆಗೆ ನಕಲಿ ಟಿಆರ್‌ಪಿ ಹಗರಣದಲ್ಲಿಯೂ ಅವರ ಹೆಸರು ಕೇಳಿಬಂದಿತ್ತು.

- Advertisement -

Latest News

error: Content is protected !!