Friday, June 5, 2026
Homeತಾಜಾ ಸುದ್ದಿಸಬ್​ ಇನ್​ಸ್ಪೆಕ್ಟರ್​ಗೆ ಚಾಕುವಿನಿಂದ‌ ಇರಿದ ಆರೋಪಿ!..ಪೊಲೀಸರಿಂದ ಫೈರಿಂಗ್

ಸಬ್​ ಇನ್​ಸ್ಪೆಕ್ಟರ್​ಗೆ ಚಾಕುವಿನಿಂದ‌ ಇರಿದ ಆರೋಪಿ!..ಪೊಲೀಸರಿಂದ ಫೈರಿಂಗ್

- Advertisement -
- Advertisement -

ಹಾಸನ:ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಮೂವರು ಯುವಕರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಸುನಿಲ್​ನನ್ನು ಬಂಧಿಸಲು ಪೊಲೀಸರು ತೆರಳಿದ್ದ ಸಂದರ್ಭದಲ್ಲಿ ಏರ್​ ಫೈರಿಂಗ್ ಮಾಡಲಾಗಿತ್ತು. ಈ ವೇಳೆ ತಪ್ಪಿಸಿಕೊಳ್ಳಲು ಸಬ್​ ಇನ್​ಸ್ಪೆಕ್ಟರ್​ಗೆ ಚಾಕುವಿನಿಂದ‌ ಇರಿದ ಆರೋಪಿ ಸುನಿಲ್​ ಕುಮಾರ್ ಮೇಲೆ ಫೈರಿಂಗ್ ನಡೆಸಲಾಗಿತ್ತು.

ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಗಿತ್ತು.ಗುಂಡೇಟು ತಿಂದು ಹಾಸನದ ಆಸ್ಪತ್ರೆಗೆ ದಾಖಲಾಗಿದ್ದ ರೌಡಿಶೀಟರ್ ಸುನಿಲ್​ನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.ಗಾಯಗೊಂಡಿರುವ ಸಬ್ ಇನ್​ಸ್ಪೆಕ್ಟರ್​ ಬಸವರಾಜು ಹಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!