Saturday, June 6, 2026
Homeಉತ್ತರ ಕನ್ನಡಅಂಕೋಲಾದಲ್ಲೊಂದು ವಿಚಿತ್ರ ಘಟನೆ; ಸಮಸ್ಯೆ ಹೇಳಿಕೊಂಡು ಬಂದಾಕೆಯನ್ನೇ ಮದುವೆಯಾಗ್ತೀನಿ ಎಂದ ದೈವ ನರ್ತಕ

ಅಂಕೋಲಾದಲ್ಲೊಂದು ವಿಚಿತ್ರ ಘಟನೆ; ಸಮಸ್ಯೆ ಹೇಳಿಕೊಂಡು ಬಂದಾಕೆಯನ್ನೇ ಮದುವೆಯಾಗ್ತೀನಿ ಎಂದ ದೈವ ನರ್ತಕ

- Advertisement -
- Advertisement -

ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲದ ಅಂಬಾರಕೊಡ್ಲೆ ಎಂಬಲ್ಲಿ ವಿಚಿತ್ರ ಪ್ರಸಂಗವೊಂದು ನಡೆದಿದೆ.  ಸಮಸ್ಯೆ ಹೇಳಿಕೊಳ್ಳಲು ಬಂದಾಕೆಯನ್ನೇ ದೈವ ನರ್ತಕ ಮದುವೆಯಾಗುವುದಾಗಿ ಅಭಯ ನೀಡಿದ ಘಟನೆ ನಡೆದಿದೆ.

ತನ್ನ ವೈಯಕ್ತಿಕ ಸಮಸ್ಯೆ ಹೇಳಿಕೊಳ್ಳಲು ಕಾಲಭೈರವ ದೇವರ ಬಳಿ ಬಂದಿದ್ದ ಬೆಳಗಾವಿ ಮೂಲದ ಮಹಿಳೆಯನ್ನು ಮದುವೆಯಾಗುವುದಾಗಿ ದೈವ ನರ್ತಕ ನುಡಿದಿದ್ದು, ಅಲ್ಲಿ ನೆರೆದಿದ್ದವರು ಶಾಕ್ ಆಗಿದ್ದಾರೆ.

ಘಟನೆಯ ವಿವರ;

ಮಹಿಳೆಯೊಬ್ಬರು ತನ್ನ ವೈಯಕ್ತಿಕ ಸಮಸ್ಯೆ ಹೇಳಿಕೊಳ್ಳಲು ಅಂಕೋಲದ ಅಂಬಾರಕೊಡ್ಲೆ ಎಂಬಲ್ಲಿಗೆ ಬಂದಿದ್ದಾರೆ. ಈ ವೇಳೆ  ದೈವದ ಹೆಸರಿನಲ್ಲಿ ಅಭಯವಿತ್ತ ದೈವ ನರ್ತಕ ನಿನ್ನನ್ನು ಮದುವೆ ಆಗುತ್ತೇನೆ ಎಂದು ನಂಬಿಸಿದ್ದಾನೆ. ಇಂಟರೆಸ್ಟಿಂಗ್ ವಿಚಾರ ಅಂದರೆ ಮಹಿಳೆಗೆ ಮದುವೆಯಾಗಿದ್ದು, ಗಂಡನಿಂದ ದೂರವಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ ದೈವ ನರ್ತಕ ಸಹ ಪತ್ನಿಯಿಂದ ದೂರವಾಗಿದ್ದಾನೆ ಎನ್ನಲಾಗಿದೆ.

ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ ಇದು ಸತ್ಯ ಸತ್ಯ ಎಂದು ದೈವದ ಪಾತ್ರಧಾರಿ ಕೂಗಿದ್ದಾನೆ. ಇನ್ನು ವಿವಾಹಿತ ಮಹಿಳೆಯನ್ನ ವಿವಾಹವಾಗುವ ಸಲುವಾಗಿ ದೈವ ನರ್ತಕ ಈ ರೀತಿ ನಾಟಕವಾಡಿದ್ದಾನೆಯೇ ಎಂಬ ಗುಸು ಗುಸು ಕೇಳಿ ಬರುತ್ತಿದೆ.

- Advertisement -

Latest News

error: Content is protected !!