Sunday, June 7, 2026
Homeಕರಾವಳಿಉಡುಪಿಉಡುಪಿ; ಮಗು ನಾಪತ್ತೆ, ಸ್ನೇಹಿತನ ವಿರುದ್ಧ ದೂರು ನೀಡಿದ ತಾಯಿ

ಉಡುಪಿ; ಮಗು ನಾಪತ್ತೆ, ಸ್ನೇಹಿತನ ವಿರುದ್ಧ ದೂರು ನೀಡಿದ ತಾಯಿ

- Advertisement -
- Advertisement -

ಉಡುಪಿ: ತನ್ನ ಮಗು ನಾಪತ್ತೆಯಾಗಿದೆ ಎಂದು ಮಹಿಳೆಯೊಬ್ಬರು ತನ್ನ ಸ್ನೇಹಿತ ವಿರುದ್ಧ ದೂರ ನೀಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಬಾಗಲಕೋಟೆ ಮೂಲದ ಭೀಮಪ್ಪ ಎಂಬವರ ಪತ್ನಿ ಶಾಂತಾ ಎಂಬವರು ಮೂಡುಸಗ್ರಿ ಎಂಬಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಇವರ ಮೂರು ವರ್ಷದ ಮಗಳು ಸುಕನ್ಯಾಳನ್ನು, ಶಾಂತಾಳ ಸ್ನೇಹಿತ ಸಂಗಮೇಶ್, ಆತನ ಸ್ನೇಹಿತ ಶಂಕರನ ಎಂಬವರ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದ.

ಆದರೆ ಸಂಜೆ ಈತ ವಾಪಾಸು ಒಬ್ಬನೇ ಮನೆಗೆ ಬಂದಾಗ ಶಾಂತಾ ಮಗುವಿನ ಬಗ್ಗೆ ವಿಚಾರಿಸಿದ್ದಾರೆ. ಆಗ ಆತ ತಾನು ಮಗುವನ್ನು ಕರೆದುಕೊಂಡು ಬರುವುದಾಗಿ ಹೇಳಿ ಜ.12 ರಂದು ಹೋದವನು ಈವರೆಗೆ ಮನೆಗೆ ಬಾರದೇ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಮಗುವಿನ ಬಗ್ಗೆ ಶಂಕರ್‌ಗೆ ಕರೆ ಮಾಡಿ ವಿಚಾರಿಸಿದಾಗ ಸಂಗಮೇಶ್ ಹಾಗೂ ಮಗಳು ಸುಕನ್ಯಾ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ಮಗುವನ್ನು ಸಂಗಮೇಶ್ ಕರೆದುಕೊಂಡು ಹೋಗಿರುವುದಾಗಿ ಶಾಂತಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

:

- Advertisement -

Latest News

error: Content is protected !!