Monday, April 29, 2024
Homeಕರಾವಳಿಸುಳ್ಯ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ; ವಿದೇಶಕ್ಕೆ ಪರಾರಿಯಾದ ಆರೋಪಿಗಳ ಬಂಧನಕ್ಕೆ...

ಸುಳ್ಯ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ; ವಿದೇಶಕ್ಕೆ ಪರಾರಿಯಾದ ಆರೋಪಿಗಳ ಬಂಧನಕ್ಕೆ ಫೀಲ್ಡ್ ಗಿಳಿದ “RAW” ಏಜೆನ್ಸಿ

spot_img
- Advertisement -
- Advertisement -

ಮಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳಿಬ್ಬರಾದ ಮೊಹಮ್ಮದ್ ಶರೀಫ್ ಮತ್ತು ಕೆ.ಎ.ಮಸೂದ್ ಸೌದಿ ಅರೇಬಿಯಾಕ್ಕೆ ಪರಾರಿಯಾಗಿರುವ ಬಗ್ಗೆ ಎನ್.ಐ.ಎ ಮಾಹಿತಿ ಕಲೆ ಹಾಕಿದ್ದು ಅದರಂತೆ ಕೇಂದ್ರ ‘ರಾ’ ಏಜೆನ್ಸಿ ಜೊತೆ ಎನ್.ಐ.ಎ ನಿರಂತರ ಸಂಪರ್ಕದಲ್ಲಿದ್ದು ಆರೋಪಿಗಳನ್ನು ಭಾರತಕ್ಕೆ ಕರೆತರಲು ದಾಖಲೆಗಳನ್ನು ಸಿದ್ಧಪಡಿಸಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

2022 ರ ಜುಲೈ 26 ರಂದು ರಾತ್ರಿ ಪ್ರವೀಣ್ ನೆಟ್ಟಾರುನನ್ನು ಬೈಕ್ ನಲ್ಲಿ ಬಂದು ತಲ್ವಾರಿನಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ರಾಜ್ಯ ಸರಕಾರ ಎನ್.ಐ.ಎ ಸಂಸ್ಥೆಗೆ ತನಿಖೆಗೆ ಒಪ್ಪಿಸಿತ್ತು. ಎನ್.ಐ.ಎ ಬೆಂಗಳೂರು ಇನ್ಸ್ಪೆಕ್ಟರ್ ಷಣ್ಮುಗಂ ನೇತೃತ್ವದ ತಂಡ ತನಿಖೆ ನಡೆಸಿ 14 ಜನರನ್ನು ಬಂಧಿಸಿ ಬೆಂಗಳೂರು ಎನ್.ಐ.ಎ ಕೋರ್ಟ್ ಗೆ 2023 ರ ಜ.20 ರಂದು 20 ಮಂದಿ ಆರೋಪಿಗಳ ವಿರುದ್ಧ 240 ಸಾಕ್ಷಿ ಸೇರಿದಂತೆ 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ‌. ಪರಾರಿಯಾಗಿರುವ ಉಳಿದ ಆರು ಜನ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಇಬ್ಬರು ಪ್ರಮುಖ ಆರೋಪಿಗಳಾದ
ಮೊಹಮ್ಮದ್ ಶರೀಫ್ ಮತ್ತು ಕೆ.ಎ.ಮಸೂದ್ ಜೊತೆ ಪ್ರಕರಣದಲ್ಲಿ ನಾಪತ್ತೆಯಾದ ನಾಲ್ಕು ಜನ ಆರೋಪಿಗಳು ಕೂಡ ವಿದೇಶಕ್ಕೆ ಹೋಗಿ ಅಡಗಿ ಕುಳಿತಿರುವ ಬಗ್ಗೆ ಎನ್.ಐ.ಎ ಅಧಿಕಾರಿಗಳಿಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಎನ್.ಐ.ಎ ಮಾಹಿತಿ ಮೇರೆಗೆ ಐಬಿ(IB) , ಇನ್ಟರ್ ಪೋಲ್( INTER POLE) ಮೂಲಕ ‘ರಾ'(RAW) ಏಜೆನ್ಸಿ ಪ್ಲ್ಯಾನ್ ಮಾಡಿ ದಾಖಲೆಗಳೊಂದಿಗೆ ವಿದೇಶಕ್ಕೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಭಾರತಕ್ಕೆ ಕರೆತಂದು ಬೆಂಗಳೂರು ಎನ್.ಐ.ಎ ವಶಕ್ಕೆ ನೀಡಲು ಫಿಲ್ಡಿಗೆ ಇಳಿದಿದೆ ಎಂದು ಎನ್.ಐ.ಎ ಸಂಸ್ಥೆಯ ಉನ್ನತ ಮೂಲಗಳು ಮಾಹಿತಿ ನೀಡಿದೆ

- Advertisement -
spot_img

Latest News

error: Content is protected !!