Wednesday, June 24, 2026
Homeತಾಜಾ ಸುದ್ದಿಪೋಲೆಂಡ್ ನಲ್ಲಿ ಕೇರಳ ಮೂಲದ ಯುವಕನ ಬರ್ಬರ ಕೊಲೆ

ಪೋಲೆಂಡ್ ನಲ್ಲಿ ಕೇರಳ ಮೂಲದ ಯುವಕನ ಬರ್ಬರ ಕೊಲೆ

- Advertisement -
- Advertisement -

ಕೇರಳ: ಪೋಲೆಂಡ್ ನಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಒಲ್ಲೂರು ಮೂಲದ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಒಲ್ಲೂರಿನ ಮುರಳೀಧರನ್ ಮತ್ತು ಸಂಧ್ಯಾ ದಂಪತಿಯ ಪುತ್ರ ಸೂರಜ್ (23) ಕೊಲೆಯಾದವರು. ಸೂರಜ್  ಕಳೆದ ಸೆಪ್ಟೆಂಬರ್‌ನಲ್ಲಿ ಪೋಲೆಂಡ್‌ಗೆ ತೆರಳಿದ್ದರು. ಅಲ್ಲಿ ಅವರು ಸ್ಲೂಬಿಸ್‌ನಲ್ಲಿರುವ ಮಾಂಸ ಸಂಸ್ಕರಣಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.

ವೀಕೆಂಡ್ ದಿನ ಮಲಯಾಳಿ ಯುವಕರಿಗೆ ಸಿಗರೇಟ್ ಸೇದುವ ವಿಚಾರವಾಗಿ ಜಾರ್ಜಿಯಾ ಮೂಲದ ಯುವಕರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಎರಡು ಗುಂಪುಗಳ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿ ಜಾರ್ಜಿಯನ್ ಮೂಲದ ಸ್ಥಳೀಯರು ಸೂರಜ್ ಮತ್ತು ಇತರೆ ನಾಲ್ವರು ಮಲೆಯಾಳಿ ಯುವಕರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿದ್ದ ಸೂರಜ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!