Friday, March 29, 2024
Homeತಾಜಾ ಸುದ್ದಿ"ಇನ್ನು ಮುಂದೆ PUC, SSLCಗೆ ಒಂದೇ ಮಂಡಳಿ: ಸದ್ಯದಲ್ಲೇ 'ಪ್ರಾಥಮಿಕ ಶಿಕ್ಷಣ ಪರಿಷತ್' ಅಸ್ತಿತ್ವಕ್ಕೆ"

“ಇನ್ನು ಮುಂದೆ PUC, SSLCಗೆ ಒಂದೇ ಮಂಡಳಿ: ಸದ್ಯದಲ್ಲೇ ‘ಪ್ರಾಥಮಿಕ ಶಿಕ್ಷಣ ಪರಿಷತ್’ ಅಸ್ತಿತ್ವಕ್ಕೆ”

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಶೈಕ್ಷಣಿಕ ಚಟುವಟಿಕೆ ನೋಡಿಕೊಳ್ಳಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇದೆ. ಪಿಯು ಶೈಕ್ಷಣಿಕ ಚಟುವಟಿಕೆ ನೋಡಿಕೊಳ್ಳೋದಕ್ಕಾಗಿ ಪದವಿ ಪೂರ್ವ ಶಿಕ್ಷಣ ಮಂಡಳಿ ಇದೆ. ಇಂತಹ ಎರಡು ಮಂಡಳಿಗಳನ್ನು ಒಂದೇ ಮಾಡುವಂತಹ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

ಈ ವಿಲೀನ ಆದಂತಹ ಎರಡು ಮಂಡಳಿಗಳನ್ನು ಪ್ರಾಥಮಿಕ ಶಿಕ್ಷಣ ಪರಿಷತ್ ಎಂದು ನಾಮಕರಣ ಮಾಡಲಾಗುತ್ತದೆ ಎಂಬುದಾಗಿ ಸಚಿವ ಸುರೇಶ್ ಕುಮಾರ್ ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, PU ಮತ್ತು SSLC ಮಂಡಳಿಗಳನ್ನು ಒಂದೇ ಮಾಡಿ ವಿಲೀನಗೊಳಿಸುವಂತೆ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಹೀಗಾಗಿ ಕೆಲವೇ ದಿನಗಳಲ್ಲಿ ಪಿಯು, ಎಸ್‌ಎಸ್‌ಎಲ್ಸಿ ಮಂಡಳಿಗಳು ವೀಲಿನಗೊಂಡು, ಪ್ರಾಥಮಿಕ ಶಿಕ್ಷಣ ಪರಿಷತ್ ಅಸ್ಥಿತ್ವಕ್ಕೆ ಬರಲಿದೆ. ಎಂದರು.

- Advertisement -
spot_img

Latest News

error: Content is protected !!