- Advertisement -
![]()
- Advertisement -
ಕಲಬುರಗಿ: ಈಡಿಗ ಸಮುದಾಯಕ್ಕೆ ಕೋಟ ಶ್ರೀನಿವಾಸ್ ಪೂಜಾರಿ ಏನೂ ಮಾಡಿಲ್ಲ ಎಂದು ಕಲಬುರಗಿಯಲ್ಲಿ ಆರ್ಯ ಈಡಿಗ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಸರ್ಕಾರಕ್ಕೆ ಮೇ 18 ರವರಗೆ ಸಮಾಜದಿಂದ ಗಡವು ನೀಡಲಾಗಿದ್ದು, ಇಲ್ಲಿದಿದ್ದರೆ ಮೇ 19 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಆರ್ಯ ಈಡಿಗ ಸಮಾಜಕ್ಕೆ ಪ್ರತ್ಯೇಕ ನಿಗಮ ಮಾಡುವಂತೆ ಆಗ್ರಹಿಸಿದ್ದಾರೆ.
ತಮ್ಮ ಕುಲಕಸುಬು ಸೇಂದಿ ತೆಗೆಯಲು ಹಾಗೂ ಮಾರಾಟಕ್ಕೆ ಅನುಮತಿ ನೀಡಬೇಕು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂತ್ರಿ ಸ್ಥಾನ ಸಿಕ್ಕರೂ ನಮ್ಮ ಸಮುದಾಯಕ್ಕೆ ಏನೂ ಮಾಡಿಲ್ಲ. ಈಡಿಗ ಸಮುದಾಯಕ್ಕೆ ಕೋಟ ಶ್ರೀನಿವಾಸ್ ಪೂಜಾರಿ ಏನೂ ಮಾಡಿಲ್ಲ. ಸಿಕ್ಕಿರೋ ಅವಧಿಯಲ್ಲಿ ಈಡಿಗರ ಯಾವ ಸಮಸ್ಯೆಯನ್ನು ಕೇಳಿಲ್ಲ. ಅವರಿಗೆ ಮಂತ್ರಿಯಾಗಲು,ಸಮುದಾಯ ಬೇಕು. ಸಮಾಜದ ಸಮಸ್ಯೆ ಬಗೆಹರಿಸಲು ಅಲ್ಲ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.
- Advertisement -


