Sunday, June 7, 2026
Homeತಾಜಾ ಸುದ್ದಿಮದುವೆಯಾದ 10 ಗಂಟೆಯಲ್ಲೇ ವರ ಹೃದಯಾಘಾತದಿಂದ ಸಾವು

ಮದುವೆಯಾದ 10 ಗಂಟೆಯಲ್ಲೇ ವರ ಹೃದಯಾಘಾತದಿಂದ ಸಾವು

- Advertisement -
- Advertisement -

ಹಾವೇರಿ: ಮದುವೆಯಾದ 10 ಗಂಟೆಯಲ್ಲಿಯೇ ವರ ಹೃದಯಾಘಾತದಿಂದ ಸಾವನ್ನಪ್ಪಿರುವ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ನಡೆದಿದೆ. ಶ್ಯಾಡಂಬಿ ಗ್ರಾಮದ ಶಿವಾನಂದ ಶೇಖಪ್ಪ ಸುಣಗಾರ (34) ಮೃತ ವರ.

ಶಿವಾನಂದ ಡಿಇಡಿ ಪದವೀಧರರಾಗಿದ್ದು, ಬುಧವಾರ ಮಧ್ಯಾಹ್ನ 12:29ಕ್ಕೆ ಸಪ್ತಪದಿ ತುಳಿದಿದ್ದರು. ಸಡಗರ ಸಂಭ್ರಮದಿಂದ ವಿವಾಹ ಕಾರ್ಯಕ್ರಮ ನೆರವೇರಿತ್ತು. ರಾತ್ರಿ ಊಟ ಮಾಡಿದ ನಂತರ ಶಿವಾನಂದಗೆ ವಾಂತಿಯಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಆದರೆ, ರಾತ್ರಿ 10 ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಿವಾನಂದ ಸಾವಿನಿಂದ ಎರಡು ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.

- Advertisement -

Latest News

error: Content is protected !!