Thursday, June 4, 2026
Homeಪ್ರಮುಖ-ಸುದ್ದಿಸಿನಿಮಾ ದೃಶ್ಯವನ್ನು ನಿಜವೆಂದು ಹಂಚಿಕೊಂಡು ಟ್ರೋಲ್ ಆದ ಕಿರಣ್ ಬೇಡಿ

ಸಿನಿಮಾ ದೃಶ್ಯವನ್ನು ನಿಜವೆಂದು ಹಂಚಿಕೊಂಡು ಟ್ರೋಲ್ ಆದ ಕಿರಣ್ ಬೇಡಿ

- Advertisement -
- Advertisement -

ನಿವೃತ್ತ ಐಪಿಎಸ್ ಅಧಿಕಾರಿ, ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಮತ್ತು ಬಿಜೆಪಿ ನಾಯಕಿ ಕಿರಣ್ ಬೇಡಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡು ಟೀಕೆಗೆ ಗುರಿಯಾಗಿದ್ದಾರೆ.


ಸಾಗರದ ಮಧ್ಯದಿಂದ ಹಾರಿ ಹೆಲಿಕಾಪ್ಟರ್ ಮೇಲೆ ಬೃಹತ್ ಶಾರ್ಕ್ ದಾಳಿ ಮಾಡುವ ೧೫ ಸೆಕೆಂಡುಗಳ ವಿಡಿಯೋವನ್ನು ಬೇಡಿ ಹಂಚಿಕೊಂಡಿದ್ದಾರೆ. ಜೊತೆಗೆ,”ನ್ಯಾಷನಲ್ ಜಿಯಾಗ್ರಫಿಕ್ ವಾಹಿನಿಯೂ ಈ “ಅಪರೂಪದ ವೀಡಿಯೊ” ಗಾಗಿ ೧ ಮಿಲಿಯನ್ ಡಾಲರ್‌ಗಳನ್ನು ಪಾವತಿಸಿದೆ ಎಂದು ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.


ಕಿರಣ್ ಬೇಡಿ ಹಂಚಿಕೊಂಡಿರುವ ಈ ವಿಡಿಯೋ, 2017 ರಲ್ಲಿ ರಿಲೀಸ್ ಆಗಿದ್ದ’ ಫೈವ್ ಹೆಡೆಡ್ ಶಾರ್ಕ್ ಅಟ್ಯಾಕ್’ ಸಿನಿಮಾದ ದೃಶ್ಯಗಳಾಗಿವೆ. ನಿವೃತ್ತ ಐಪಿಎಸ್ ಅಧಿಕಾರಿಯಾಗಿ ಒಂದು ಸಿನಿಮಾದ ದೃಶ್ಯವನ್ನು ನಿಜವೆಂದು ಪೋಸ್ಟ್ ಮಾಡಿದ ಕಿರಣ್ ಬೇಡಿ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಬೇಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

- Advertisement -

Latest News

error: Content is protected !!