Wednesday, June 17, 2026
Homeಕರಾವಳಿಉಡುಪಿಉಡುಪಿ ಜಿಲ್ಲಾಡಳಿತದಿಂದ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧ: ಒಂದು ದಿನದ ಮೊದಲೇ ಗಂಗೊಳ್ಳಿಯಲ್ಲಿ ಪ್ರತ್ಯಕ್ಷವಾದ ಶ್ರೀರಾಮಸೇನೆ...

ಉಡುಪಿ ಜಿಲ್ಲಾಡಳಿತದಿಂದ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧ: ಒಂದು ದಿನದ ಮೊದಲೇ ಗಂಗೊಳ್ಳಿಯಲ್ಲಿ ಪ್ರತ್ಯಕ್ಷವಾದ ಶ್ರೀರಾಮಸೇನೆ ಮುಖ್ಯಸ್ಥ

- Advertisement -
- Advertisement -

ಉಡುಪಿ :ಜಿಲ್ಲೆಗೆ ಆಗಮಿಸಿದಂತೆ ಉಡುಪಿ ಜಿಲ್ಲಾಧಿಕಾರಿಗಳಾದ ಕೂರ್ಮ ರಾವ್ ಅವರು ಪ್ರಮೋದ್ ಮುತಾಲಿಕ್ ಅವರಿಗೆ ನಿರ್ಬಂಧ ಹೇಳಿದ್ದಾರೆ. ಆದರೆ ಹೀಗಿರುವಾಗಲೇ ಒಂದು ದಿನದ ಮೊದಲೇ ಪ್ರಮೋದ್ ಮುತಾಲಿಕ್ ಗಂಗೊಳ್ಳಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಮುತಾಲಿಕ್ ಗೆ ನಿರ್ಬಂಧ ಹೇರಿತ್ತು. ಇವತ್ತಿನ ಗಂಗೊಳ್ಳಿ ಕಾರ್ಯಕ್ರಮಕ್ಕೆ ಭಾಗಿಯಾಗದಂತೆ ತಿಳಿಸಿತ್ತು. ಆದರೆ ನಿನ್ನೆ ರಾತ್ರಿಯೇ ಗಂಗೊಳ್ಳಿಗೆ ಆಗಮಿಸಿದ್ದಾರೆ ಪ್ರಮೋದ್ ಮುತಾಲಿಕ್. ರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡಿ
ಹಿಂದೂ ಜಾಗರಣ ವೇದಿಕೆ ಪ್ರಮುಖರ ಜತೆ ಚರ್ಚೆ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಬಿಜೆಪಿ ಸರಕಾರವೇ ನಿರ್ಬಂಧ ಹೇರುತ್ತಿರುವುದು ಬೇಸರ ತರಿಸಿದೆ ಎಂದು ಆಕ್ರೋಶ ಹೊರ ಹಾಕಿದರು.

- Advertisement -

Latest News

error: Content is protected !!