Thursday, June 4, 2026
Homeಆರಾಧನಾಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ₹75 ಲಕ್ಷ್ಮ ಮೌಲ್ಯದ ಪ್ರಭಾವಳಿ ಸಮರ್ಪಣೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ₹75 ಲಕ್ಷ್ಮ ಮೌಲ್ಯದ ಪ್ರಭಾವಳಿ ಸಮರ್ಪಣೆ

- Advertisement -
- Advertisement -

ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆಲಂಗಾಣದ ಉದ್ಯಮಿ ಎ.ಮಹೇಶ್ ರೆಡ್ಡಿ ಅವರು ಶನಿವಾರದಂದು ₹75 ಲಕ್ಷ್ಮ ಮೌಲ್ಯದ ಚಿನ್ನದ ಪ್ರಭಾವಳಿಯನ್ನು ಸಮರ್ಪಿಸಿದರು.

ದೇವಳದ ಬ್ರಹ್ಮಕಲಶೋತ್ಸವ ದಿನದ ಪ್ರಯುಕ್ತ ದೇವಾಲಯಕ್ಕೆ ₹4 ಲಕ್ಷ ವೆಚ್ಚದಲ್ಲಿ ಹೂವಿನ ಅಲಂಕಾರ ಮಾಡಿಸಿದರು. ಪ್ರಾರ್ಥನೆ ಸಲ್ಲಿಸಿ, ಪ್ರಭಾವಳಿ ಸಮರ್ಪಿಸಿದ ಮಹೇಶ್‌ ಹಾಗೂ ರಾಧಿಕಾ ದಂಪತಿಯನ್ನು ಗೌರವಿಸಲಾಯಿತು.

ಪ್ರಭಾವಳಿಯು 1.20 ಕೆ.ಜಿ. ಚಿನ್ನ ಹಾಗೂ 3.20 ಕೆ.ಜಿ. ಬೆಳ್ಳಿಯನ್ನು ಹೊಂದಿದ್ದು, ₹75 ಲಕ್ಷ ವೆಚ್ಚವಾಗಿದೆ. ಬೆಂಗಳೂರಿನ ರಾಜೇಶ್ವರಿ ನಗರದ ಶಿಲ್ಪಿಗಳಾದ ಅಲಗ್ ರಾಜ್ ಸ್ಥಪತಿ ಪದ್ಮಲಯ ಆರ್ಟ್ ಹಾಗೂ ಕ್ರಾಫ್ಟ್ ಸಂಸ್ಥೆಯಲ್ಲಿ ತಯಾರಿಸಲಾಗಿದೆ. ಮಹೇಶ್ ರೆಡ್ಡಿ ಅವರು ದೇವಳದ ಒಳಾಂಗಣಕ್ಕೆ ಬೆಳ್ಳಿ ರಥ ನೀಡುವುದಾಗಿ ತಿಳಿಸಿದ್ದಾರೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸದಸ್ಯರಾದ ಪಿ.ಜಿ.ಎಸ್.ಎನ್.ಪ್ರಸಾದ್, ಮನಮೋಹನ್ ರೈ, ಶ್ರೀವತ್ಸ, ವನಜಾ ವಿ.ಭಟ್, ಪ್ರಸನ್ನ ದರ್ಬೆ, ಶೋಭಾ ಗಿರಿಧರ‌, ಲೋಕೇಶ್‌ ಮುಂಡೋಕಜೆ, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಸತೀಶ್ ಕೂಜುಗೋಡು ಭಾಗವಹಿಸಿದ್ದರು.

- Advertisement -

Latest News

error: Content is protected !!