Wednesday, June 3, 2026
Homeಕರಾವಳಿಕೋಟೆಕಾರು ಪಿಜಿ ಯುವತಿಯ ನಾಪತ್ತೆ ಪ್ರಕರಣ; ಚೈತ್ರಾ ನಾಪತ್ತೆ ಪ್ರಕರಣದ ಹಿಂದೆ ಲವ್ ಜಿಹಾದ್ ಆರೋಪ;...

ಕೋಟೆಕಾರು ಪಿಜಿ ಯುವತಿಯ ನಾಪತ್ತೆ ಪ್ರಕರಣ; ಚೈತ್ರಾ ನಾಪತ್ತೆ ಪ್ರಕರಣದ ಹಿಂದೆ ಲವ್ ಜಿಹಾದ್ ಆರೋಪ; ಎರಡು ದಿನದೊಳಗೆ ಯುವತಿಯನ್ನ ಪತ್ತೆ ಹಚ್ಚದಿದ್ದಲ್ಲಿ ಠಾಣಾ ಮುಂದೆ ಪ್ರತಿಭಟನೆ; ಮುರಳಿಕೃಷ್ಣ ಹಸಂತಡ್ಕ ಎಚ್ಚರಿಕೆ..!

- Advertisement -
- Advertisement -

ಮಂಗಳೂರು: ಇಲ್ಲಿನ ಕೋಟೆಕಾರು ಬಳಿಯ ಪಿಜಿಯಲ್ಲಿ ತಂಗಿದ್ದ ಪಿಹೆಚ್‌ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ವಾರದ ಹಿಂದೆಯೇ ನಾಪತ್ತೆಯಾಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಈಕೆಯ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಎಂಬಂತೆ ಇದೀಗ ಲವ್ ಜಿಹಾದ್ ಆರೋಪ ಕೇಳಿಬಂದಿದೆ.

ಚೈತ್ರಾ ತಂಗಿದ್ದ ಪಿಜಿಗೆ ಮೂಲತಃ ಬಂಟ್ವಾಳದ ನೇರಳಕಟ್ಟೆಯ ನಿವಾಸಿ, ಪುತ್ತೂರಿನ ಕೂರ್ನಡ್ಕದಲ್ಲಿ ವಾಸವಿದ್ದ ಅನ್ಯಕೋಮಿನ ಯುವಕನೋರ್ವ ಬರುತ್ತಿದ್ದ. ಆತ ಚೈತ್ರಾಳಿಗೆ ಗಾಂಜಾ ರುಚಿ ತೋರಿಸಿ ಕರೆದೊಯ್ದ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದೀಗ ಚೈತ್ರಾ ನಾಪತ್ತೆ ಹಿಂದೆ ಬಂಟ್ವಾಳದ ಅನ್ಯಕೋಮಿನ ಯುವಕನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಮಾಡೂರು ಬಜರಂಗದಳದ ಕಾರ್ಯಕರ್ತರು ಈ ಮೊದಲೇ ಚೈತ್ರಾಳ ಮನೆಯವರಿಗೆ, ಆಕೆ ತಂಗಿದ್ದ ಪಿಜಿಗೆ ಶಂಕಿತ ಯುವಕ ಬರುತ್ತಿದ್ದ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದರು. ಮಾಹಿತಿ ನೀಡಿದ ಬಳಿಕ ಚೈತ್ರಾ ಹೆಬ್ಬಾರ್ ನಾಪತ್ತೆಯಾಗಿದ್ದಳು ಎಂದು ತಿಳಿದು ಬಂದಿದೆ.

ಇನ್ನು ಚೈತ್ರಾಳ ತಂದೆಯ ನಿಧನದ ನಂತರ ಆಕೆಯ ದೊಡ್ಡಪ್ಪನ ಆರೈಕೆಯಲ್ಲಿ ಇದ್ದಳು. ಈ ಹಿನ್ನೆಲೆಯಲ್ಲಿ ಹಿನ್ನೆಲೆ ಆಕೆಯ ದೊಡ್ಡಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರಿಗೆ ದೂರು ನೀಡಿ ಒಂದು ವಾರವಾದರೂ ಚೈತ್ರಾ ಪತ್ತೆಯಾಗಿಲ್ಲ. ಇನ್ನೆರಡು ದಿನಗಳಲ್ಲಿ ಪತ್ತೆಯಾಗದೇ ಇದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಬಜರಂಗದಳ ಕರ್ನಾಟಕ ಪ್ರಾಂತ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ನೀಡಿದ್ದಾರೆ.

- Advertisement -

Latest News

error: Content is protected !!