Wednesday, June 24, 2026
Homeಕರಾವಳಿಸುಳ್ಯದಲ್ಲಿ ಹೊತ್ತಿ ಉರಿದ ಗ್ರೈಂಡರ್

ಸುಳ್ಯದಲ್ಲಿ ಹೊತ್ತಿ ಉರಿದ ಗ್ರೈಂಡರ್

- Advertisement -
- Advertisement -

ಸುಳ್ಯ: ನಗರದ ಹಳೆಗೇಟು ಗುಂಡಿಯಡ್ಕದ ಜಿ. ಸಾಧಿಕ್ ಎಂಬವರ ಮನೆಯಲ್ಲಿ ಅಕ್ಕಿ ರುಬ್ಬುತ್ತಿದ್ದ ವೇಳೆ ಗ್ರೈಂಡರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟುಹೋದ ಘಟನೆ ನಡೆದಿದೆ.

ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬಲು ಹಾಕಿ ಮತ್ತೊಂದು ಮನೆ ಕೆಲಸದಲ್ಲಿ ಕೋಣೆಯಲ್ಲಿ ತೊಡಗಿಕೊಂಡಿದ್ದಾಗ ವಯರ್ ಸುಟ್ಟುಹೋದ ವಾಸನೆ ಬಂದಿದ್ದು, ಅಡುಗೆ ಕೋಣೆಗೆ ಧಾವಿಸಿ ನೋಡಿದಾಗ ಬೆಂಕಿ ಹೊತ್ತಿಕೊಂಡಿತ್ತು.

ಕೂಡಲೇ ಮೈನ್ ಸ್ವಿಚ್ ಆಫ್ ಮಾಡಿ, ಗ್ರೈಂಡರ್ ನ ಪಕ್ಕದಲ್ಲಿದ್ದ ಗ್ಯಾಸ್ ಸಿಲಿಂಡರನ್ನು ಹೊರಗೆ ತಂದು ಸಂಭಾವ್ಯ ಅನಾಹುತ ತಪ್ಪಿಸಿದರು. ಐದು ತಿಂಗಳ ಹಿಂದೆ ಖರೀದಿಸಿದ ಗ್ರೈಂಡರ್ ಇದು ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!