Friday, June 5, 2026
Homeಕರಾವಳಿಪುತ್ತೂರು: ನರಿಮೊಗರಿನಲ್ಲಿ ಮರ ಕಡಿಯುವ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಸಾವು

ಪುತ್ತೂರು: ನರಿಮೊಗರಿನಲ್ಲಿ ಮರ ಕಡಿಯುವ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಸಾವು

- Advertisement -
- Advertisement -

ಪುತ್ತೂರು: ಮರ ಕಡಿಯುವ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ನರಿಮೊಗರಿನಲ್ಲಿ ನಡೆದಿದೆ.ಇಲ್ಲಿನ ಮಾಡನ್ನೂರಿನ ನಿವಾಸಿ ವಸಂತ(35) ಮೃತ ಯುವಕ.
ಮರ ಕಡಿಯುವ ಕೆಲಸ ಮಾಡುತ್ತಿದ್ದ ವಸಂತ ಅವರು ಇಂದು ನರಿಮೊಗರು ಐಟಿಐ ಕಾಲೇಜು ಬಳಿ ಮರವೊಂದನ್ನು ಕಡಿಯುತ್ತಿದ್ದರು. ಈ ವೇಳೆ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದೆ. ಪರಿಣಾಮ ವಿದ್ಯುತ್ ಶಾಕ್ ಹೊಡೆದು ವಸಂತ್ ಅವರಿಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆ ತರಲಾಗಿದೆ.ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.
ಮೃತ ವಸಂತ್ ಎರಡು ಪುಟ್ಟ ಮಕ್ಕಳು, ಪತ್ನಿ, ತಂದೆ, ತಾಯಿ ಸಹೋದರಿ ಹಾಗೂ ಸಹೋದರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!