Wednesday, May 8, 2024
Homeತಾಜಾ ಸುದ್ದಿಏಳು ವರ್ಷಗಳಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೋಮಾಸ್ಥಿತಿಯಲ್ಲಿದ್ದ ಮಹಿಳೆ ಸಾವು : ಕುಟುಂಬಸ್ಥರು ಪಾವತಿಸಬೇಕಾದ ಬಿಲ್ ಎಷ್ಟು...

ಏಳು ವರ್ಷಗಳಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೋಮಾಸ್ಥಿತಿಯಲ್ಲಿದ್ದ ಮಹಿಳೆ ಸಾವು : ಕುಟುಂಬಸ್ಥರು ಪಾವತಿಸಬೇಕಾದ ಬಿಲ್ ಎಷ್ಟು ಗೊತ್ತಾ?

spot_img
- Advertisement -
- Advertisement -

ಬೆಂಗಳೂರು: ಕಳೆದ ಏಳು ವರ್ಷಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ 35 ವರ್ಷದ ಮಹಿಳೆ ಇತ್ತೀಚೆಗೆ ನಿಧನರಾಗಿದ್ದಾರೆ.ಮಹಿಳೆ ಪಾವತಿಸಬೇಕಾಗ ಬಿಲ್ ನೋಡಿದ್ರೆ ಮೈ ಜುಮ್ ಅನ್ನಿಸದೇ ಇರದು.

ದೆಹಲಿ‌ ಮೂಲದ ಪೂನಂ ರಾಣಾ ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು 2015ರ ಅಕ್ಟೋಬರ್‌ನಲ್ಲಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಶಸ್ತ್ರಕ್ರಿಯೆಯೂ‌ ನಡೆದಿತ್ತು. ಆದರೆ ಮಹಿಳೆಯ ಆರೋಗ್ಯ ದಿನ ಕಳದಂತೆ ಹದಗೆಟ್ಟಿತು. ಸುದೀರ್ಘ ಏಳು ವರ್ಷ ಕೋಮಾವಸ್ಥೆಯಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನಕಾರಿ ಆಗಲಿಲ್ಲ. ಮಂಗಳವಾರ ಆಕೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಪೂನಂರನ್ನು 2015ರ ಅಕ್ಟೋಬರ್‌ 2ರಂದು ಎಂಐಸಿಯುಗೆ ದಾಖಲಿಸಲಾಗಿತ್ತು. ಅಂದಿನಿಂದ ಆಕೆ ಮೇ 24ರಂದು ನಿಧನರಾಗುವ ತನಕ ಉತ್ತಮ ರೀತಿಯ ಚಿಕಿತ್ಸೆಯನ್ನೇ ಒದಗಿಸಲಾಗಿದೆ. ಪೂನಂ ಚಿಕಿತ್ಸೆಗೆ 9.5 ಕೋಟಿ ರೂಪಾಯಿ ಬಿಲ್‌ ಆಗಿದೆ. ಇದರಲ್ಲಿ ಕುಟುಂಬದವರು 2 ಕೋಟಿ ರೂಪಾಯಿ ಪಾವತಿಸಿದ್ದಾರೆ ಎಂದು ಮಣಿಪಾಲ್‌ ಹಾಸ್ಪಿಟಲ್ಸ್‌ ಹೇಳಿದೆ.

- Advertisement -
spot_img

Latest News

error: Content is protected !!