Thursday, June 4, 2026
Homeಕರಾವಳಿಉಡುಪಿಉಡುಪಿ: ಎಫ್ ಎಸ್ ಎಲ್ ತಂಡ ಬಂದ ಬಳಿಕ ಪೋಸ್ಟ್ ಮಾರ್ಟಂ: ಸಂತೋಷ್‌ ನ ಇಬ್ಬರು...

ಉಡುಪಿ: ಎಫ್ ಎಸ್ ಎಲ್ ತಂಡ ಬಂದ ಬಳಿಕ ಪೋಸ್ಟ್ ಮಾರ್ಟಂ: ಸಂತೋಷ್‌ ನ ಇಬ್ಬರು ಸ್ನೇಹಿತರನ್ನು ವಿಚಾರಣೆಗೊಳಪಡಿಸಿದ್ದೇವೆ: ಎಸ್ಪಿ ವಿಷ್ಣುವರ್ಧನ್

- Advertisement -
- Advertisement -

ಉಡುಪಿ: ತೀವ್ರ ಸಂಚಲನಕ್ಕೆ ಕಾರಣವಾಗಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ.ಇದೊಂದು ಹೈ ಪ್ರೊಫೈಲ್ ಪ್ರಕರಣವಾದ ಕಾರಣ ಖುದ್ದು ಎಸ್ಪಿ ,ಹೊಟೇಲಿನಲ್ಲಿ ಮೊಕ್ಕಾಂ ಹೂಡಿ ತನಿಖೆಯ ನೇತೃತ್ವ ವಹಿಸಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಎಸ್ಪಿ ವಿಷ್ಣುವರ್ಧನ್, ಸಂತೋಷ್ ಪಾಟೀಲ್ ಮೃತಪಟ್ಟಿರುವುದು ಕಂಡುಬಂದಿದೆ. ಅವರ ಇಬ್ಬರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಮಂಗಳೂರಿನಿಂದ ಎಫ್ ಎಸ್ಎಲ್ ಟೀಮ್ ಬರುತ್ತಿದೆ. ಮೃತರ ಸಂಬಂಧಿಕರು ಬರುತ್ತೇವೆ ಎಂದು ಹೇಳಿದ್ದಾರೆ. ಸಂಬಂಧಿಕರು ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಲಾಡ್ಜಿನ ಕೊಠಡಿಯನ್ನು ಸೀಲ್ ಮಾಡಲಾಗಿದೆ ಎಂದು ಹೇಳಿರುವ ಎಸ್ಪಿ ವಿಷ್ಣುವರ್ದನ್ ಎಫ್ ಎಸ್ ಎಲ್ ನವರು ಮತ್ತು ಕುಟುಂಬಸ್ಥರು ಬಂದ ನಂತರ ರೂಮ್ ಓಪನ್ ಮಾಡುತ್ತೇವೆ. ಸಾವಿಗೆ ನಿಖರ ಕಾರಣ ಏನು ಎಂಬುದು ಎಫ್ ಎಸ್ ಎಲ್ ಬಂದ ನಂತರವೇ ಗೊತ್ತಾಗಲಿದೆ.ಉಡುಪಿಯಲ್ಲೇ ಮರಣೋತ್ತರ ಪರೀಕ್ಷೆ ಮಾಡುತ್ತೇವೆ. ಸಂಬಂಧಿಕರು ಬಂದನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸಂಬಂಧಿಕರು ಘಟನಾ ಸ್ಥಳಕ್ಕೆ ಬರುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಅವರು ಬರುವ ತನಕ ನಾವು ಯಾವುದೇ ವಿಧಿ ವಿಧಾನ ಮಾಡುವುದಿಲ್ಲ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!