Monday, May 20, 2024
Homeಅಪರಾಧವಿಟ್ಲ: ಅಕ್ರಮ ಕೋಳಿ ಅಂಕಕ್ಕೆ ದಾಳಿ 15 ಮಂದಿ ಬಂಧನ

ವಿಟ್ಲ: ಅಕ್ರಮ ಕೋಳಿ ಅಂಕಕ್ಕೆ ದಾಳಿ 15 ಮಂದಿ ಬಂಧನ

spot_img
- Advertisement -
- Advertisement -

ವಿಟ್ಲ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು 15 ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಕುಳ ಗ್ರಾಮದ ಪಾಂಡೆಲುಗುತ್ತು ಎಂಬಲ್ಲಿ ನಡೆದಿದೆ.


ಭರತ್, ಬಾಲಕೃಷ್ಣ , ಸಂಜೀವ , ಶೇಷಪ್ಪ ಗೌಡ , ಜನಾರ್ಧನ , ಭಾಸ್ಕರ , ಗೋಪಾಲ ಕೆ , ರಾಮಚಂದ್ರ , ವಿಶ್ವನಾಥ , ಕೃಷ್ಣಪ್ಪ ಪೂಜಾರಿ ,ಗಿರೀಶ್ , ಅವಿನಾಶ್ ,ಸಂತೋಷ್ , ರುಕ್ಮಯ್ಯ ,ರಕ್ಷೀತ್ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ .


ಕುಳ ಗ್ರಾಮದ ಪಾಂಡೆಲು ಗುತ್ತು ಎಂಬಲ್ಲಿ ಕಾನೂನು ಬಾಹಿರವಾಗಿ ಕೋಳಿ ಅಂಕ ಜೂಜು ಆಟ ಅಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಎ ಸಿ ಜೆ ಮತ್ತು ಜೆ ಎಮ್ ಸಿ ನ್ಯಾಯಾಲಯದ ನ್ಯಾಯಾದೀಶರ ಅನುಮತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.


ಕೋಳಿ ಅಂಕ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು ಹಣ 6590 ರೂ ನಗದು ಹಾಗೂ ವಿವಿಧ ಜಾತಿಯ 9 ಕೋಳಿಗಳನ್ನು ವಶಕ್ಕೆ ಪೊಲೀಸರು ಪಡೆದಿದ್ದಾರೆ .

- Advertisement -
spot_img

Latest News

error: Content is protected !!