Thursday, June 4, 2026
Homeಚಿಕ್ಕಮಗಳೂರು ಚಾರ್ಮಾಡಿ ಘಾಟಿಯಲ್ಲಿ ಮಿತಿ ಮೀರಿದ ಪ್ರವಾಸಿಗರ  ಹುಚ್ಚಾಟ ; ಮಿನಿ ಫಾಲ್ಸ್ ಗಳ ಬಳಿ ಪೊಲೀಸರ...

 ಚಾರ್ಮಾಡಿ ಘಾಟಿಯಲ್ಲಿ ಮಿತಿ ಮೀರಿದ ಪ್ರವಾಸಿಗರ  ಹುಚ್ಚಾಟ ; ಮಿನಿ ಫಾಲ್ಸ್ ಗಳ ಬಳಿ ಪೊಲೀಸರ ನಿಯೋಜನೆ

- Advertisement -
- Advertisement -

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ  ಹುಚ್ಚಾಟ ಮಿತಿ ಮೀರಿದೆ. ಈ ಹಿನ್ನೆಲೆ ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕ; ಮಿನಿ ಫಾಲ್ಸ್ ಗಳ ಬಳಿ  ಹೈವೇ ಪೆಟ್ರೋಲ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಮನ ಬಂದಂತೆ ಕುಣಿಯುತ್ತಿದ್ದ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರು. ರಸ್ತೆ ಮಧ್ಯೆ ಕುಣಿಯೋ ಧಾವಂತದಲ್ಲಿ ವಾಹನಗಳಿಗೂ ಅಡ್ಡ ಹೋಗುತ್ತಿದ್ದರು. ಇದರಿಂದ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಹಾಗಾಗಿ ಇದಕ್ಕೆಲ್ಲಾ ಕಡಿವಾಣ ಹಾಕಲು ಪೊಲೀಸರನ್ನು  ನಿಯೋಜಿಸಲಾಗಿದೆ.

- Advertisement -

Latest News

error: Content is protected !!