Wednesday, June 3, 2026
Homeಕರಾವಳಿಉಡುಪಿಉಡುಪಿ; ಬುಲೆಟ್ ಗೆ ದನಗಳು ಅಡ್ಡ ಬಂದು ಅಪಘಾತವಾಗಿ ಬುಲೆಟ್ ಸವಾರ ಸಾವು

ಉಡುಪಿ; ಬುಲೆಟ್ ಗೆ ದನಗಳು ಅಡ್ಡ ಬಂದು ಅಪಘಾತವಾಗಿ ಬುಲೆಟ್ ಸವಾರ ಸಾವು

- Advertisement -
- Advertisement -

ಉಡುಪಿ; ಬುಲೆಟ್ ಗೆ ದನಗಳು ಅಡ್ಡ ಬಂದು ಅಪಘಾತವಾಗಿ ಬುಲೆಟ್ ಸವಾರ ಸಾವನ್ನಪ್ಪಿದ ಘಟನೆ ಕುಂದಾಪುರದ ಕಾವ್ರಾಡಿ ಗ್ರಾಮದ ದೂಪದಕಟ್ಟೆ ಎಂಬಲ್ಲಿ ನಡೆದಿದೆ.

ಮೃತರನ್ನು ಪ್ರದೀಪ ಶೆಟ್ಟಿ (28) ಮೃತ ದುರ್ದೈವಿ.ಜುಲೈ 30ರಂದು ರಾತ್ರಿ ಕಂಡ್ಲೂರು ಕಡೆಯಿಂದ ವಾಲ್ತೂರು ಅರಾರಿ ಕಡೆಗೆ ಹೋಗುತ್ತಿದ್ದಾಗ, ರಸ್ತೆಗೆ ಅಡ್ಡ ಬಂದ ಎರಡು ದನಗಳಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.ಇದರ ಪರಿಣಾಮ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಪ್ರದೀಪ ಶೆಟ್ಟಿಯನ್ನು ಮಣಿಪಾಲ ಆಸ್ಪತ್ರೆಗೆ ದಾಆಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.

ಅಪಘಾತದಿಂದ ಒಂದು ದನ ಗಾಯಗೊಂಡಿದ್ದು ಇನ್ನೊಂದು ದನ ಸ್ಥಳದಲ್ಲಿಯೇ ಮೃತಪಟ್ಟಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!