Thursday, June 4, 2026
Homeತಾಜಾ ಸುದ್ದಿಡಿವೈಎಸ್ಪಿ ಆತ್ಮಹತ್ಯೆ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಮತ್ತೊಂದು ಶಾಕ್: ಪೊಲೀಸ್ ದಂಪತಿ ನೇಣಿಗೆ ಶರಣು

ಡಿವೈಎಸ್ಪಿ ಆತ್ಮಹತ್ಯೆ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಮತ್ತೊಂದು ಶಾಕ್: ಪೊಲೀಸ್ ದಂಪತಿ ನೇಣಿಗೆ ಶರಣು

- Advertisement -
- Advertisement -

ಬೆಂಗಳೂರು: ಸಿಐಡಿ ಡಿವೈಎಸ್​ಪಿ ಲಕ್ಷ್ಮೀ ಅವರ ಸಾವಿನ ಶಾಕ್ ನಿಂದ ಹೊರ ಬರುವ ಮುನ್ನವೇ ಪೊಲೀಸ್ ಇಲಾಖೆಗೆ ಮತ್ತೊಂದು ಶಾಕ್ ಎದುರಾಗಿದೆ. ಪೊಲೀಸ್ ದಂಪತಿ ಆತ್ಮಹತ್ಯೆ ಶರಣಾಗಿದ್ದಾರೆ.

ಪೊಲೀಸ್ ಪೇದೆಗಳಾದ ಶೀಲಾ ಹಾಗೂ ಹೆಚ್.ಸಿ. ಸುರೇಶ್ ನೇಣಿಗೆ ಶರಣಾಗಿದ್ದಾರೆ. ಕಳೆದ ಹತ್ತು ವರ್ಷದ ಹಿಂದೆ ಶೀಲಾ‌ ಮತ್ತು ಸುರೇಶ್​ ಮದುವೆಯಾಗಿದ್ದರು. ಇಬ್ಬರದ್ದು ಪ್ರೇಮವಿವಾಹ. ಶೀಲಾ ಮೂಲತಃ ಚಿಕ್ಕಮಗಳೂರಿನವರು. ಸುರೇಶ್ ಕೋಲಾರ ಮೂಲದವರು. ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತಿನಿಖೆ ನಡೆಸುತ್ತಿದ್ದಾರೆ.

ಶೀಲಾ ಕೊತ್ತನೂರು ಠಾಣೆಯಲ್ಲಿ ಹಾಗೂ ಸುರೇಶ್​ ಸಂಪಿಗೆಹಳ್ಳಿ ಎಸಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆ ಪ್ರಕರಣ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!