Friday, May 10, 2024
Homeತಾಜಾ ಸುದ್ದಿ"ಮೋದಿ ಜಿ ಥರ ಮಾಡಬೇಡಿ, ಎಲ್ಲರೂ ಮಾಸ್ಕ್ ಹಾಕಿ" - ವಿಡಿಯೋ ಹಾಕಿ ಟ್ರೊಲ್ ಮಾಡುತ್ತಿರುವ...

“ಮೋದಿ ಜಿ ಥರ ಮಾಡಬೇಡಿ, ಎಲ್ಲರೂ ಮಾಸ್ಕ್ ಹಾಕಿ” – ವಿಡಿಯೋ ಹಾಕಿ ಟ್ರೊಲ್ ಮಾಡುತ್ತಿರುವ ನೆಟ್ಟಿಗರು

spot_img
- Advertisement -
- Advertisement -

ನವದೆಹಲಿ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರೀ ಟೀಕೆಗೆ ಗ್ರಾಸವಾಗಿದ್ದಾರೆ. ದೇಶಾದ್ಯಂತ ಕೋವಿಡ್‌-19 ಸಾಂಕ್ರಮಿಕದ ಅಬ್ಬರ ಇರುವ ಪ್ರಧಾನಿಯೇ ಹೀಗೆ ಮಾಡಿದರೆ ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಕರಕುಶಲ ಮಾರಾಟ ಸ್ಟಾಲ್ ಗಳ ಬಳಿ ಪ್ರಧಾನಿ ಮೋದಿಯವರು ಹೋಗಿದ್ದಾರೆ. ಈ ವೇಳೆ ಅವರು ಮಾಸ್ಕ್ ಧರಿಸಿರಲಿಲ್ಲ. ಅದನ್ನು ಗಮನಿಸಿದ್ದ ಮಳಿಗೆಯವರು, ಮೋದಿಯವರಿಗೆ ಮಾಸ್ಕ್ ನೀಡಲು ಮುಂದಾಗುತ್ತಾರೆ. ಆಗ ಆ ಮಾಸ್ಕ್ ನ್ನು ಮೋದಿಯವರು ನಿರಾಕರಿಸುತ್ತಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಮಾಸ್ಕ್ ನಿರಾಕರಿಸಿದ ಪ್ರಧಾನಿಯ ವಿಡಿಯೋವನ್ನು ಶೇರ್‌ ಮಾಡಿದ ಆಪ್‌ ಪಾರ್ಟಿಯ ಟ್ವಿಟರ್‌ ಹ್ಯಾಂಡಲ್‌, “ಮಾಸ್ಕ್ ಧರಿಸಿ. ಮೋದಿ ಅವರಂತೆ ಇರಬೇಡಿ” ಎಂದು ವ್ಯಂಗ್ಯ ಮಾಡಿದೆ.

- Advertisement -
spot_img

Latest News

error: Content is protected !!